ಮಹಿಳೆ ದೂರು: ಬೆಂಗಳೂರಲ್ಲಿ ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅರೆಸ್ಟ್...! Nanjeshwara Shivacharya Swamiji

ಮಹಿಳೆಯೊಬ್ಬರು ನೀಡಿದ ದೂರಿನ ಗಂಭೀರತೆಯನ್ನು ಅರಿತುಕೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು, ಯಾವುದೇ ವಿಳಂಬ ಮಾಡದೆ ಎಫ್‌ಐಆರ್ ದಾಖಲಿಸಿಕೊಂಡು ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
Nanjeshwara Shivacharya Swamiji
ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ
Published on: 

ಬೆಂಗಳೂರು: ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಹುಣಸಮಾರನಹಳ್ಳಿ ಮಠದ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ( Nanjeshwara Shivacharya Swamiji ) ಬೆಂಗಳೂರು ಪೊಲೀಸರು ಇಂದು (ಅ. 12) ಅರೆಸ್ಟ್ ಮಾಡಿದ್ದಾರೆ.

ಮಹಿಳೆ ನೀಡಿದ ದೂರಿನ ಗಂಭೀರತೆಯನ್ನು ಅರಿತುಕೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು, ಯಾವುದೇ ವಿಳಂಬ ಮಾಡದೆ ಎಫ್‌ಐಆರ್ ದಾಖಲಿಸಿಕೊಂಡು ಸ್ವಾಮೀಜಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಖಾಕಿ ಪಡೆಯು ಈ ಕುರಿತು ಕಟ್ಟುನಿಟ್ಟಿನ ವಿಚಾರಣೆ ಮತ್ತು ತನಿಖಾ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ವಂಚಿಸಿ ಹಾಗೂ ಲೈಂಗಿಕ ದೌರ್ಜನ್ಯ (ಅತ್ಯಾಚಾರ) ಎಸಗಿದ್ದಾರೆ ಎಂಬ ಗಂಭೀರ ಆರೋಪ ಸ್ವಾಮೀಜಿ ವಿರುದ್ಧ ಕೇಳಿಬಂದಿದೆ.

Also Read
ಅದನ್ನು ಮಾಡಿದ್ದೇ ದೊಡ್ಡ ತಪ್ಪು: ಬಿಗ್​ಬಾಸ್​ ಸೀಸನ್​ 13 ಬಗ್ಗೆ ಹೀಗ್ಯಾಕಂದ್ರೂ ರೂಪೇಶ್​ ರಾಜಣ್ಣ!? Roopesh Rajanna
Nanjeshwara Shivacharya Swamiji

ಹುಣಸಮಾರನಹಳ್ಳಿ ಮಠವು ಬೆಂಗಳೂರಿನ ವಿಮಾನ ನಿಲ್ದಾಣದ ಹತ್ತಿರದ ಪ್ರಮುಖ ಪ್ರದೇಶದಲ್ಲಿ ಸುಮಾರು 1500ಕ್ಕೂ ಅಧಿಕ ಎಕರೆ ಅತ್ಯಮೂಲ್ಯ ಜಮೀನನ್ನು ಹೊಂದಿದ್ದು, ಈ ಹಿಂದೆ 2017ರಲ್ಲೂ ಇವರ ವಿರುದ್ಧ ಇಂತಹದ್ದೇ ಆರೋಪಗಳು ಕೇಳಿಬಂದಿದ್ದವು.

ಸದ್ಯ ಸ್ವಾಮೀಜಿಯ ಬಂಧನ ಧಾರ್ಮಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ನಿಜಕ್ಕೂ ಮೋಸದ ಪ್ರಕರಣವೇ ಅಥವಾ ಆಸ್ತಿ ವಿವಾದ ಹಾಗೂ ಬ್ಲಾಕ್‌ಮೇಲ್ ತಂತ್ರವೇ ಎಂಬುದು ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಹೊರಬರಬೇಕಿದೆ.

ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಮೇಲಿನ ವಿವಾದಗಳ ಹಿನ್ನೆಲೆ ನೋಡುವುದಾದರೆ, ಇದು ಮೊದಲ ಬಾರಿಗೆ ಕೇಳಿಬಂದಿರುವ ಆರೋಪವಲ್ಲ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಹುಣಸಮಾರನಹಳ್ಳಿ ಮಠವು ಸುಮಾರು 1500ಕ್ಕೂ ಅಧಿಕ ಎಕರೆ ಅತ್ಯಮೂಲ್ಯ ಜಮೀನನ್ನು ಹೊಂದಿರುವ ಅತ್ಯಂತ ಶ್ರೀಮಂತ ಮಠಗಳಲ್ಲಿ ಒಂದಾಗಿದ್ದು, ಇದರ ಆಸ್ತಿ ಹಾಗೂ ಜಮೀನಿಗೆ ಸಂಬಂಧಿಸಿದ ವಿವಾದಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತವೆ.

ಇದಕ್ಕೂ ಮೊದಲು, ಅಂದರೆ 2017ರ ಅಕ್ಟೋಬರ್‌ನಲ್ಲೂ ಸಹ ಸ್ವಾಮೀಜಿಯವರ ವಿರುದ್ಧ ಇದೇ ರೀತಿಯಾಗಿ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹಾಗೂ ದೈಹಿಕ ಸಂಪರ್ಕದ ಆರೋಪಗಳು ಕೇಳಿಬಂದಿದ್ದು, ಆ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಮಠದ ಮುಂದೆ ಪ್ರತಿಭಟನೆ ನಡೆಸಿ ಅವರನ್ನು ಕೆಳಗಿಳಿಸುವಂತೆ ಆಗ್ರಹಿಸಿದ್ದರು. ಪ್ರಸ್ತುತ ಮುನ್ನೆಲೆಗೆ ಬಂದಿರುವ ಅತ್ಯಾಚಾರ ಹಾಗೂ ವಂಚನೆಯ ಪ್ರಕರಣದ ಹಿಂದೆ ವೈಯಕ್ತಿಕ ದೂರುಗಳ ಜೊತೆಗೆ ಮಠದ ಆಸ್ತಿ ಮತ್ತು ಹಣಕಾಸಿನ ವಿವಾದಗಳ ಶಂಕೆಯೂ ಇದ್ದು, ಇದರ ಹಿಂದಿನ ನೈಜ ಹಿನ್ನೆಲೆ ಸಮಗ್ರ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net