ಕೃಷಿಯಿಂದ ಇಂಧನ ಪರಿಕಲ್ಪನೆ: ರೈತರೇ, ಎಥೆನಾಲ್ ಉತ್ಪಾದಿಸಿ ಆದಾಯ ಗಳಿಸಿ - Ethanol

ಕೈಗಾರಿಕೆ ಮತ್ತು ಇಂಧನ ವಲಯದಲ್ಲಿ ನವೀನ ಪರಿಹಾರ ಅಭಿವೃದ್ಧಿಪಡಿಸುವ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಯಾಗಿರುವ ಬೆಂಟೆನ್ ಪವರ್ ಪ್ರೈ.ಲಿ., ಪಿಕೊ ಎಥೆನಾಲ್ ಘಟಕ ತಯಾರಿಸಿದೆ. ವೈವಿಧ್ಯಮಯ ಕೃಷಿ ಕಚ್ಛಾ ವಸ್ತುಗಳಿಗೆ ಅಧಿಕ ಶುದ್ಧತೆಯ ಎಥೆನಾಲ್ ಪರಿವರ್ತಿಸುವ ಮ್ಯಾಡ್ಯುಲರ್ ಮತ್ತು ಕಂಟೈನರ್ ಘಟಕಕ್ಕೆ ಈಗಾಗಲೇ ಪೇಟೆಂಟ್ ಸಹ ಸಿಕ್ಕಿದೆ. 2027ರ ಜುಲೈನಿಂದ ಇದು ಪ್ರಾರಂಭವಾಗಲಿದೆ.
ಬೆಂಟೆನ್ ಪವರ್ ಪ್ರೈ.ಲಿ
ಪಿಕೊ ಎಥೆನಾಲ್ ಘಟಕ
Published on: 

ಬೆಂಗಳೂರು: (Generate Income by Producing Ethanol) ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿರುವ ರಾಜ್ಯದ ರೈತರು, ಎಥೆನಾಲ್ ಉತ್ಪಾದಿಸುವ ಮೂಲಕ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದಾಗಿದೆ.

ರೈತರು ತಮ್ಮ ಜಮೀನಿನ ಚಿಕ್ಕ ಜಾಗದಲ್ಲಿ ‘ಪಿಕೊ ಎಥೆನಾಲ್ ಘಟಕ’ ಸ್ಥಾಪಿಸಿ ಬೆಳೆ ಮತ್ತು ಕೃಷಿ ತ್ಯಾಜ್ಯದಿಂದ ಎಥೆನಾಲ್, ಜೈವಿಕ ಅನಿಲ ಮತ್ತು ಎರೆಹುಳು ಗೊಬ್ಬರ ಉತ್ಪಾದಿಸಬಹುದು. ಈ ಘಟಕ ಸ್ಥಾಪನೆಗೆ 18-20 ಲಕ್ಷ ರೂ.ವೆಚ್ಚವಾಗಲಿದೆ. ಪ್ರತಿನಿತ್ಯ ಕನಿಷ್ಠ 100 ಲೀ.ನಿಂದ 2 ಕೆಎಲ್‌ಪಿಡಿ (ಕಿಲೋ ಲೀಟರ್) ಎಥೆನಾಲ್ ಉತ್ಪಾದಿಸಬಹುದು. ಪ್ರತಿ ಲೀಟರ್‌ಗೆ ಇಂತಿಷ್ಟು ದರ ನಿಗದಿಪಡಿಸಿ ತೈಲ ಕಂಪನಿಗಳೇ ರೈತರು ಉತ್ಪಾದಿಸುವ ಎಥೆನಾಲ್ ಖರೀದಿಸಲಿವೆ. ‘ಕೃಷಿಯಿಂದ ಇಂಧನದವರೆಗೆ’ ಪರಿಕಲ್ಪನೆ ಅಡಿ ರೈತರು, ಎಥೆನಾಲ್ ಘಟಕದ ಮಾಲೀಕರಾಗಿ ಆದಾಯ ಪಡೆಯಬಹುದು.

ಕೈಗಾರಿಕೆ ಮತ್ತು ಇಂಧನ ವಲಯದಲ್ಲಿ ನವೀನ ಪರಿಹಾರ ಅಭಿವೃದ್ಧಿಪಡಿಸುವ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಯಾಗಿರುವ ಬೆಂಟೆನ್ ಪವರ್ ಪ್ರೈ.ಲಿ., ಪಿಕೊ ಎಥೆನಾಲ್ ಘಟಕ ತಯಾರಿಸಿದೆ. ವೈವಿಧ್ಯಮಯ ಕೃಷಿ ಕಚ್ಛಾ ವಸ್ತುಗಳಿಗೆ ಅಧಿಕ ಶುದ್ಧತೆಯ ಎಥೆನಾಲ್ ಪರಿವರ್ತಿಸುವ ಮ್ಯಾಡ್ಯುಲರ್ ಮತ್ತು ಕಂಟೈನರ್ ಘಟಕಕ್ಕೆ ಈಗಾಗಲೇ ಪೇಟೆಂಟ್ ಸಹ ಸಿಕ್ಕಿದೆ. 2027ರ ಜುಲೈನಿಂದ ಇದು ಪ್ರಾರಂಭವಾಗಲಿದೆ. ಕಂಪನಿಯವರೇ ಎಥೆನಾಲ್ ಘಟಕ ಸ್ಥಾಪಿಸಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಕೃಷಿ ಮೇಳದಲ್ಲಿ ‘ಪಿಕೊ ಎಥೆನಾಲ್ ಘಟಕ’ದ ಪ್ರಾತ್ಯಕ್ಷಿಕೆ ಮಳಿಗೆ ಪ್ರತಿಷ್ಠಾಪಿಸಲಾಗಿದೆ.

Also Read
ಇಂದು ಕಾರ್ತಿಕ ದೀಪ: ದರ್ಗಾದಲ್ಲಿ ಮುಸ್ಲಿಮರ ಪ್ರಾರ್ಥನೆ, ಸಿಆರ್‌ಪಿಎಫ್‌ಗೆ ಹಿಂದೂಗಳಿಂದ ಪುಷ್ಪವೃಷ್ಟಿ! | Karthigai Deepam
ಬೆಂಟೆನ್ ಪವರ್ ಪ್ರೈ.ಲಿ

ವಿದೇಶಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ನಮ್ಮ ರಾಷ್ಟ್ರದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿರಂತರವಾಗಿ ಇಂಧನ ಬೆಲೆ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಹಾಗಾಗಿ, ಪರ್ಯಾಯ ಇಂಧನ ಉತ್ಪಾದನೆ ಸವಾಲು ಎದುರಿಸಲು ಜೈವಿಕ ಇಂಧನ ಉತ್ತಮ ಪರ್ಯಾಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಬೆಂಗಳೂರು ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ಹೊಂಗೆ, ಬೇವು, ಹಿಪ್ಪೆ, ಜಟ್ರೋ, ಸಿಮರೂಬ ಸೇರಿ ಇತರ ಎಣ್ಣೆ ಬೀಜಗಳು ಮತ್ತು ಪ್ರಾಣಿಜನ್ಯ ಕೊಬ್ಬಿನಿಂದ ಜೈವಿಕ ಡಿಸೇಲ್ ತಯಾರಿಸಬಹುದು. ಇದನ್ನು ನೇರವಾಗಿ ಡೀಸೆಲ್ ಜತೆ ಮಿಶ್ರಿಣ ಮಾಡಬಹುದು.ಕಬ್ಬು, ಸಿಹಿಜೋಳ, ಹಣ್ಣು ಮತ್ತು ಕೃಷಿ ತ್ಯಾಜ್ಯ ಹುಲ್ಲು ಸೇರಿ ಇತ್ಯಾದಿ ಶರ್ಕರ ಪಿಷ್ಟದಿಂದ ಎಥೆನಾಲ್ ತಯಾರಿಸಲು ಕಚ್ಛಾವಸ್ತುಗಳಾಗಿವೆ. ಇದನ್ನು ಪೆಟ್ರೋಲ್‌ನೊಂದಿಗೆ ವಿವಿಧ ಪ್ರಮಾಣಗಳಲ್ಲಿ ಬೆರೆಸಿ ಬಳಸಬಹುದು. ಕೃಷಿ,ಗೃಹ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಬಯೋಗ್ಯಾಸ್ (ಜೈವಿಕ ಅನಿಲ) ಉತ್ಪಾದಿಸಬಹುದು. ಜೈವಿಕ ಅನಿಲ ಉತ್ಪಾದಿಸಿದ ನಂತರ ಉಳಿಯುವ ಘನತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಬಳಸಬಹುದು.