ಇನ್‌ಸ್ಪೆಕ್ಟರ್ ಸೇರಿ 7 ಮಂದಿ ವಿರುದ್ಧ ಎಫ್ಐ​ಆರ್

ನಿವೇಶನ ವಿಚಾರಕ್ಕೆ ಗಲಾಟೆ, ಹಲ್ಲೇ
crime fir
Published on: 

ಬೆಂಗಳೂರು: ನಿವೇಶನ ವಿಚಾರಕ್ಕೆ ಮಾರಕಾಸಗಳಿಂದ ಹಲ್ಲೇ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪದ ಮೇಲೆ ಇನ್‌ಸ್ಪೆಕ್ಟರ್ ಸೇರಿ 7 ಜನರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಹೊಮ್ಮದೇವನಹಳ್ಳಿಯ ನಿವಾಸಿ ಫಾತಿಮಾ ಎಂಬುವರು ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್ ಮತ್ತು ಅವರ ಸಹಚರರಾದ ಅನಿಲ್ ಕುಮಾರ್, ನಾಗರಾಜ್, ನಂಜುಂಡ ರೆಡ್ಡಿ, ನಾಗವೇಣಿ, ಅಜಯ್, ಪ್ರವೀಣ್ ಕುಮಾರ್ ವಿರುದ್ಧ ಅ.5ರಂದು ಪ್ರಕರಣ ದಾಖಲಾಗಿದೆ. ಗಲಾಟೆ ವೇಳೆ ಾತಿಮಾ(56), ಕಾಣಿಕ್ಯರಾಜ್(63), ಬಾಲರಾಜ್ (38), ನಕ್ಷತ್ರ(33), ನವೀನ್ ಕುಮಾರ್(36)ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್, ಪೊಲೀಸ್ ತರಬೇತಿ ಕೇಂದ್ರವೊಂದರಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೊಮ್ಮದೇವನಹಳ್ಳಿಯ ಜ್ಞಾನಬಿಂದು ಶಾಲೆಯ ಬಳಿ 2004ರಲ್ಲಿ ಮುನಿರೆಡ್ಡಿ ಎಂಬುವರಿಗೆ ಸೇರಿದ ನಿವೇಶನವನ್ನು ಫಾತಿಮಾ ದಂಪತಿ ಖರೀದಿಸಿದ್ದರು. ಆ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು. ಅಕ್ಟೋಬರ್ 4ರಂದು 25ರಿಂದ 30 ಜನರ ಗುಂಪು ಸ್ಥಳಕ್ಕೆ ಬಂದು ಗಲಾಟೆ ನಡೆಸಿತ್ತು. ಮಾರಕಾಸ್ತ್ರ ಹಾಗೂ ದೊಣ್ಣೆ ತಂದು ಹಲ್ಲೆ ನಡೆಸಿತ್ತು. ಫಾತಿಮಾ, ಕಾಣಿಕ್ಯರಾಜ್, ಬಾಲರಾಜ್, ನವೀನ್‌ಕುಮಾರ್ ಹಾಗೂ ನಕ್ಷತ್ರ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಸ್ತಿ ವಿಚಾರ ಸಂಬಂಧ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಸಿವಿಲ್ ನ್ಯಾಯಾಲಯದಲ್ಲಿ ತಡೆ ಆದೇಶ ಸಿಕ್ಕಿದೆ. ಯಾವ ಕಾರಣಕ್ಕೆ ನ್ಯಾಯಾಲಯದಿಂದ ತಡೆ ಆದೇಶ ತಂದಿದ್ದೀರಿ ಎಂದು ಪ್ರಶ್ನಿಸಿ ಆರೋಪಿಗಳು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಇನ್‌ಸ್ಪೆಕ್ಟರ್ ಕಡೆಯವರು ಾತಿಮಾ ಸೇರಿ ಇತರರ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net