ಎಸ್‌ಐಆರ್ ಹೋರಾಟಕ್ಕೆದಿಲ್ಲಿಯತ್ತ ಹೊರಟ ಕೈ ನಾಯಕರು

ಎಸ್‌ಐಆರ್ ವಿರುದ್ಧ ಅಖಿಲ ಭಾರತ ಕಾಂಗ್ರೆಸ್​ ಸಮಿತಿ ದೊಡ್ಡಮಟ್ಟದ ಹೋರಾಟಕ್ಕೆ ಅಣಿಯಾಗಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಆಹ್ವಾನದ ಮೇರೆಗೆ ಕರ್ನಾಟಕದ ಶಾಸಕರು, ಸಚಿವರು ದಿಲ್ಲಿಯತ್ತ ಮುಖ ಮಾಡಿದ್ದಾರೆ.
CM DK
CM DK
Published on: 

ಬೆಂಗಳೂರು: ಎಸ್‌ಐ ಆರ್ ವಿರುದ್ಧ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಎಐಸಿಸಿಗೆ ಬಲ ತುಂಬಲು 250ಕ್ಕೂ ಹೆಚ್ಚು ರಾಜ್ಯ ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಹಿರಿಯ ಮುಖಂಡರು ದಿಲ್ಲಿಯತ್ತ ಮುಖ ಮಾಡಿದ್ದಾರೆ.

ಎಸ್‌ಐಆರ್ ವಿರುದ್ಧ ಸೋಮವಾರ ದೊಡ್ಡಮಟ್ಟದ ಹೋರಾಟಕ್ಕೆ ಅಣಿಯಾಗಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಶಾಸಕರು, ಸಚಿವರಿಗೆ ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ದಿಲ್ಲಿಗೆ ಬಂದು ಸೇರಿ ಎಂದು ಬುಲಾವ್ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಆದಿಯಾಗಿ ರಾಜ್ಯದ ಬಹುತೇಕ ಸಚಿವರು, ಶಾಸಕರು ಇಂದೇ ದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ಉಳಿದಂತೆ ಸಂಸದರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಹಿರಿಯ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಕೂಡ ಹೊರಡಲು ಅಣಿಯಾಗಿದ್ದಾರೆ.

ದಿಲ್ಲಿಗೆ ಬರುವಂತೆ ಶನಿವಾರ ರಾತ್ರಿ ಎಐಸಿಸಿ ಸಂದೇಶ ಸಿಗುತ್ತಿದ್ದಂತೆ ಸಚಿವರು, ಶಾಸಕರು ವಿಮಾನ ಟಿಕೆಟ್ ಬುಕ್ ಮಾಡಲು ಮುಗಿಬಿದ್ದರು. ಬಹುತೇಕ ಟಿಕೆಟ್‌ಗಳು ಬೆಂಗಳೂರಿನಿಂದ ಬುಕ್ ಆಗಿದ್ದರೆ ಇನ್ನೂ ಕೆಲವು ಹುಬ್ಬಳ್ಳಿಯಿಂದ ಆಗಿವೆ.

ಕೆಲವರಿಗೆ ಭಾನುವಾರ ರಾತ್ರಿಯ ವಿಮಾನ ಸಿಕ್ಕರೆ ಇನ್ನೂ ಕೆಲವರು ಸೋಮವಾರ ಬೆಳಗಿನ ಜಾವ 4 ಗಂಟೆಗೆ ಪ್ರಯಾಣಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net