

ಬೆಂಗಳೂರು: ಎರಡು-ಮೂರು ರಾಜ್ಯ ಹೊರತುಪಡಿಸಿ ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚು ಗೌರವಧನ ನೀಡಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಗುಜರಾಥ್ ಹಾಗೂ ಉತ್ತರ ಪ್ರದೇಶದಲ್ಲಿ ಮಾಸಿಕ 2500 ರೂ. ಗೌರವಧನ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಈ ಮೊತ್ತ 7500 ರೂ. ಇದೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಜೆಪಿ ನಾಯಕರು ಇದನ್ನು ಏಕೆ ಹೋಲಿಕೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ಅವರಿಗೆ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಅವರ ಬೇಡಿಕೆಗಳ ಬಗ್ಗೆ ಪರಿಶೀಲಿಸುತ್ತಿದೆ ಎಂದರು.
ರಾಷ್ಟ್ರೀಯ ಆರೋಗ್ಯಮಿಷನ್ ಎಂದು ಹೆಸರಿಟ್ಟುಕೊಂಡಿದ್ದರೂ ರಾಜ್ಯಸರ್ಕಾರವೇ ಎಲ್ಲವನ್ನೂ ಮಾಡಬೇಕು ಅಂದ್ರೆ ಹೇಗೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಆಶಾ ಕಾರ್ಯಕರ್ತೆಯರ ಅಮೂಲ್ಯ ಸೇವೆಯನ್ನು ನಾವು ಕಡೆಗಣಿಸುತ್ತಿಲ್ಲ ಆದರೆ, ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿ ಎಂದು ಹೇಳುತ್ತಿದ್ದೇವೆ. ಸಹನೆ ಇರಲಿ ಎಂದು ವಿನಂತಿಸುತ್ತಿದ್ದೇವೆ.
ಸರ್ಕಾರಕ್ಕೂ ಎದುರಾಗುವ ಆರ್ಥಿಕ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಸಾಧಕ- ಬಾಧಕ ಚರ್ಚಿಸಿ ಮಾತನಾಡುತ್ತೇವೆ. ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳಲ್ಲಿ ಇಷ್ಟು ದೊಡ್ಡ ಆರ್ಥಿಕ ಹೊರೆ ಹೊರುವುದು ಸುಲಭವಲ್ಲ
ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಏನು ಹೇಳಬೇಕೋ ಹೇಳಿದ್ದಾರೆ. ನಾವು ಕೂಡ ವಿನಂತಿ ಮಾಡುತ್ತಿದ್ದೇವೆ. ಚಳಿ- ಬಿಸಿಲಲ್ಲಿ ನೀವು ಪ್ರತಿಭಟನೆ ಕೂರುವುದು ನಮಗೂ ಸರಿ ಅನಿಸುತ್ತಿಲ್ಲ ಎಂದು ತಿಳಿಸಿದರು.