ವ್ಯಸನಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಸಲಹೆ
ಬೆಳಗಾವಿ ತಾಲೂಕಿನ ಹಲಗಾದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟಿಸಿದರು. ಅಡವೀಶ್ವರ ದೇವರು, ಡಾ.ಜಿ.ಆರ್.ಸೊನೇರ, ನಟರಾಜ ಬಾದಾಮಿ, ದಯಾಶೀಲ, ಡಾ.ಶ್ರೀಕಾಂತ ವಿ.ಎನ್. ಇದ್ದರು.
ಬೆಳಗಾವಿ ತಾಲೂಕಿನ ಹಲಗಾದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟಿಸಿದರು. ಅಡವೀಶ್ವರ ದೇವರು, ಡಾ.ಜಿ.ಆರ್.ಸೊನೇರ, ನಟರಾಜ ಬಾದಾಮಿ, ದಯಾಶೀಲ, ಡಾ.ಶ್ರೀಕಾಂತ ವಿ.ಎನ್. ಇದ್ದರು.
Published on: 

ಬೆಳಗಾವಿ: ದುಶ್ಚಟದಿಂದ ಒಬ್ಬ ವ್ಯಕ್ತಿ ಮಾತ್ರ ಹಾಳಾಗುವುದಿಲ್ಲ. ಅದರ ಹೊಡೆತ ಇಡೀ ಕುಟುಂಬದ ಮೇಲೆ ಬೀಳುತ್ತದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ತಾಲೂಕಿನ ಹಲಗಾ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಜನಜಾಗೃತಿ ಜಾಥಾ, ಗಾಂಧಿ ಸ್ಮತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವ್ಯಸನಮುಕ್ತ ಸಮಾಜ ನಿರ್ಮಾಣ ಒಬ್ಬ ವ್ಯಕ್ತಿಯನ್ನು ವ್ಯಸನದಿಂದ ಹೊರತರುವುದಷ್ಟೇ ಅಲ್ಲ, ಒಂದು ಕುಟುಂಬವನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ಕಾಪಾಡುವ ಸಾಮಾಜಿಕ ಹೊಣೆಗಾರಿಕೆಯಾಗಿದೆ.

ಗಾಂಧೀಜಿ ಕನಸು ಕಂಡ ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದಿಂದ, ಆರೋಗ್ಯದಿಂದ ಹಾಗೂ ಗೌರವದಿಂದ ಬದುಕಬೇಕು. ಅಂತಹ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವ್ಯಸನಮುಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ತಾರಿಹಾಳದ ಅಡವೀಶ್ವರ ದೇವರು, ಡಾ.ಜಿ.ಆರ್.ಸೊನೇರ, ನಟರಾಜ ಬಾದಾಮಿ, ದಯಾಶೀಲ, ಡಾ.ಶ್ರೀಕಾಂತ ವಿ.ಎನ್., ಚಾರುಕೀರ್ತಿ ಸೈಬಣ್ಣವರ, ಮಲ್ಲಿಕಾರ್ಜುನ ವಾಲಿ, ವಿಠ್ಠಲ ಪಿಶೆ, ಜಗದೀಶ ಹಾರೂಗೊಪ್ಪ, ಬಸವರಾಜ ಸೊಪ್ಪಿಮಠ, ಸತೀಶ ನಾಯ್ಕ, ಸುರೇಶ ಇಟಗಿ ಇತರರಿದ್ದರು.

ತೂಕದ ಯಂತ್ರ ಉದ್ಘಾಟನೆ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಎಪಿಎಂಸಿ ಉಪ ಮಾರುಕಟ್ಟೆಯ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ 80 ಮೆಟ್ರಿಕ್ ಟನ್ ಸಾಮರ್ಥ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net