ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಐಹೋಳೆ ಚಾಲನೆ

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಐಹೋಳೆ ಆರೋಪ
ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಐಹೋಳೆ ಚಾಲನೆ ನೀಡಿದರು.
ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಐಹೋಳೆ ಚಾಲನೆ ನೀಡಿದರು.
Published on: 

ವಿವಿಧ ಕಾಮಗಾರಿಗೆ ಶಾಸಕ ಐಹೋಳೆ ಚಾಲನೆ
ವಿಜಯವಾಣಿ  ಸುದ್ದಿಜಾಲ ಚಿಕ್ಕೋಡಿ
ಎಂಎಸ್‌ಪಿ ಸೇರಿ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಕರೆಯಲಾದ ಸಭೆಯಲ್ಲಿ ರೈತರ ಪರವಾಗಿ ನಿರ್ಣಯ ತೆಗೆದುಕೊಳ್ಳುವ ಭರವಸೆ ಇದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ವಿಶ್ವಾಸ ವ್ಯಕ್ತ ಪಡಿಸಿದರು.
ತಾಲೂಕಿನ ಮುಗಳಿ ಗ್ರಾಮದಲ್ಲಿ ಬುಧವಾರ ೬೫ ಲಕ್ಷ್ಮಿ ವೆಚ್ಚದ ನೂತನ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ, ಕಮತೇನಟ್ಟಿ ಗ್ರಾಮದಲ್ಲಿ ೫ ಲಕ್ಷ ರೂ. ವೆಚ್ಚದ ಸಮುದಾಯ ಭವನ ಹಾಗೂ ಕರೋಶಿ ಗ್ರಾಮದಲ್ಲಿ ೧೨ ಲಕ್ಷ ರೂ. ಅನುದಾನದ ಬಾಬು ಜಗಜೀವನ್ ರಾಮ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಂಜೂರಾದ ಕಾಮಗಾರಿಗಳು ಯಾವುದೇ ಲೋಪದೋಷವಿಲ್ಲದೆ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ನಿಗಾವಹಿಸಬೇಕು. ಇನ್ನು  ರಾಯಭಾಗ ಮತಕ್ಷೇತ್ರದಲ್ಲಿ ಶಾಹುಪಾರ್ಕ್, ಕಂಕಣವಾಡಿ ಹಾಗೂ ಕರೋಶಿ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಮತ್ತು ಸ್ವಾಸ್ಥö್ಯ ಕೇಂದ್ರ  ನೂತನ ಕಟ್ಟಡ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ರೈತರ ಬೆಳೆಗೆ ಸೂಕ್ತ ಪರಿಹಾರ ನೀಡದೆ ಕೇವಲ ೨,೫೦೦ ನೀಡಿರುವುದು ದುರ್ದೈವ. ರಾಜ್ಯದಲ್ಲಿನ ಕಾಂಗ್ರೇಸ್ ಸರ್ಕಾರಕ್ಕೆ ಜನರ ಬಗ್ಗೆ ಹಾಗು ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ರಾಜು ಹರಗನ್ನವರ, ಈರಗೌಡ ಪಾಟೀಲ, ವಿಜಯ ಕೊಠಿವಾಲೆ, ರಮೇಶ ಪಾಟೀಲ, ಲಗಮನ್ನ ಹಂಚನಾಳೆ, ಶಿವಪ್ಪ ಬಂಬಲವಾಡೆ, ಸಿದ್ಧಗೌಡಾ ಪಾಟೀಲ, ಪ್ರಕಾಶ ಕಂಬಾರ, ದಯಾನಂದ ಅಮ್ಮಿನಭಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net