ಮಾರುತಿ ಮಾಂಗ ಪಿಎಚ್. ಡಿ ಪ್ರದಾನ

ರಾಣಿ ಚನ್ನಮ್ಮ ವಿವಿಯಿಂದ ಪಿಎಚ್. ಡಿ
ಮಾರುತಿ ಮಾಂಗ
ಮಾರುತಿ ಮಾಂಗ
Published on: 

ಮಾರುತಿ ಮಾಂಗ ಅವರಿಗೆ ಪಿಎಚ್.ಡಿ ಪ್ರದಾನಬೆಳಗಾವಿ: ಸಂಕೇಶ್ವರದ ಎಸ್.ಡಿ.ವ್ಹಿ.ಎಸ್  ಸಂಘದ ಶ್ರೀ ಶಿವರುದ್ರೇಶ್ವರ ಕಲಾ ಮತ್ತು ಪಟ್ಟಣ ಪಂಚಾಯತ್ ವಿಜ್ಞಾನ ಮಹಾವಿದ್ಯಾಲ, ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಕಿತ್ತೂರ್ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಂಶೋಧನಾ ವಿದ್ಯಾರ್ಥಿ ಮಾರುತಿ ಮಾಂಗ ಸಮಾಜಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆಪಿಎಚ್‌.ಡಿ ಪ್ರದಾನ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಮಾಜಶಾಸ್ತ್ರ ವಿಷಯದಲ್ಲಿ “ಇನಫಾರ್ಮೆಶನ್ ಸೊಸೈಟಿ ಆ್ಯಂಡ ರೂರಲ್ ಡೆವಲಪಮೆಂಟ್ : ಎ ಸೊಶಿಯಾಲಾಜಿಕಲ್ ಸ್ಟಡಿ ಆಫ್ ಇಂಪ್ಯಾಕ್ಟ ಆಫ್ ಐ.ಸಿ.ಟಿ ಆನ್ ರೂರಲ್ ಸೊಸೈಟಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್. ಡಿ ಪದವಿ ಪ್ರದಾನ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಹಿರಿಯ ಪ್ರಾಧ್ಯಾಪಕರಾದ ಪ್ರೊ. ಚಂದ್ರಿಕಾ ಕೆ.ಬಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net