

ಮತ್ತೆ ಮುನ್ನಲೆಗೆ ಜಿಲ್ಲಾ ವಿಭಜನೆ ಕೂಗು
ದಶಕಗಳ ಬೇಡಿಕೆಗೆ ಮರುಜೀವ | ಅಧಿವೇಶನದಲ್ಲಿ ನಿರ್ಣಯಕ್ಕೆ ಒತ್ತಾಯ
ಆನಂದ ಭಮ್ಮನ್ನವರ ಚಿಕ್ಕೋಡಿ
ರಾಜ್ಯದಲ್ಲೇ ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜಿಸಿ ನಾಲ್ಕು ಹೊಸ ಜಿಲ್ಲೆ ರಚನೆ ಮಾಡಬೇಕು ಎನ್ನುವ ಹಲವು ವರ್ಷದ ಕೂಗು ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಚಳಿಗಾಲ ಅಧಿವೇಶನದ ವೇಳೆ ಜಿಲ್ಲಾ ವಿಭಜನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲೆಯು ೧೫ ತಾಲೂಕು, ೧೮ ವಿಧಾನಸಭಾ ಕ್ಷೇತ್ರ ಹಾಗೂ ಎರಡೂವರೆ ಲೋಕಸಭಾ ಕ್ಷೇತ್ರ(ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದ ಒಂದಿಷ್ಟು ಭಾಗ), 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ವಿಭಜನೆಯಿಂದ ಆಡಳಿತ ವ್ಯವಸ್ಥೆ ಜನರಿಗೆ ಇನ್ನು ಹತ್ತಿರವಾಗುತ್ತದೆ ಎಂಬ ದೃಷ್ಟಿಯಿಂದ ಜಿಲ್ಲಾ ವಿಭಜಿಸುವಂತೆ ಹಲವು ವರ್ಷದಿಂದ ಹೋರಾಟ ಮಾಡುತ್ತಲ್ಲೇ ಬರಲಾಗಿದೆ. ಆದರೆ, ಬೇಡಿಕೆ ಮಾತ್ರ ಈಡೇರಿಲ್ಲ.
ಜಿಲ್ಲಾ ಕೇಂದ್ರ ಬಲು ದೂರ:
ಅಥಣಿ, ಚಿಕ್ಕೋಡಿ, ಗೋಕಾಕ, ರಾಮದುರ್ಗ, ಸವದತ್ತಿ, ನಿಪ್ಪಾಣಿ, ಕಾಗವಾಡ ಸೇರಿದಂತೆ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಜನರು ಜಿಲ್ಲಾ ಕೇಂದ್ರ ಬೆಳಗಾವಿಗೆ ತಲುಪಲು ೧೦೦ರಿಂದ ೨೦೦ ಕಿಮೀ. ಕ್ರಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಭಜನೆಯಾದರೆ ಜನರಿಗೆ ಅನುಕೂಲ ಆಗಲಿದೆ. ಜತೆಗೆ ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಜಿಲ್ಲೆ ಘೋಷಿಸಬೇಕು ಎಂಬುವುದು ಹೋರಾಟಗಾರರ ವಾದವಾಗಿದೆ.
೪ ತಾಲೂಕಿನಿಂದ ಬೇಡಿಕೆ:
ಜೆಲ್ಲೆಯಲ್ಲಿ ಚಿಕ್ಕೋಡಿ, ಗೋಕಾಕ, ಅಥಣಿ ಹಾಗೂ ಬೈಲಹೊಂಗಲ ಭಾಗದ ಜನರು ಪ್ರತ್ಯೇಕ ಜಿಲ್ಲೆಗಾಗಿ ಹಲವಾರು ವರ್ಷಗಳಿಂದ ನಿರಂತರ ಆಗ್ರಹಿಸುತ್ತಿದ್ದಾರೆ. ಆದರೆ, ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಹೊಸ ಜಿಲ್ಲೆ ಪ್ರಸ್ತಾವಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಕಳೆದ ಬಾರಿ ಚಳಿಗಾಲ ಅýವೇಶನದಲ್ಲಿ ಜಿಲ್ಲೆಯ ಕೆಲ ಶಾಸಕರು ಚಿಕ್ಕೋಡಿ ಜಿಲ್ಲೆ ಘೋಷಣೆ ಕುರಿತು ಪ್ರಸ್ತಾಪಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಅýವೇಶನದಲ್ಲಿಯಾದರೂ, ಬೇಡಿಕೆಗೆ ಮನ್ನಣೆ ಸಿಗಲಿ ಎಂಬುವುದು ಜನರ ಆಶಯವಾಗಿದೆ.
ರಾಜಕೀಯ ಲೆಕ್ಕಾಚಾರ:
ಬೆಳಗಾವಿ ಜಿಲ್ಲೆ ವಿಭಜನೆಗೊಂಡು ರಚನೆಯಾದ ಹೊಸ ಜಿಲ್ಲೆಗಳ ಮೇಲೆ ರಾಜಕೀಯ ಪ್ರಭುತ್ವ ಸಾýಸಬಹುದು ಎಂಬುದು ಕೆಲ ರಾಜಕೀಯ ಧುರೀಣರ ಲೆಕ್ಕಾಚಾರವಾದರೆ, ಅಖಂಡ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿರುವ ರಾಜಕೀಯ ಕುಟುಂಬಗಳಿಗೆ ಬೆಳಗಾವಿ ಭಾಗದ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕ. ಇಂಥ ರಾಜಕೀಯ ಲೆಕ್ಕಾಚಾರದಿಂದ ಪ್ರತ್ಯೇಕ ಜಿಲ್ಲಾ ಕನಸು ಈಡೇರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
------
ಕೋಟ್-೧
ಅಥಣಿಗೆ ಹಲವು ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಉಳಿದ ಕಚೇರಿಗಳನ್ನು ಕೂಡ ಹಂತಹಂತವಾಗಿ ತರಲಾಗುವುದು. ಅಥಣಿ, ಕಾಗವಾಡ, ಕುಡಚಿ ವಿಧಾನಸಭಾ ಕ್ಷೇತ್ರ ಹಾಗೂ ಇನ್ನೆರಡು ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ಅಥಣಿ ಜಿಲ್ಲೆಯನ್ನಾಗಿಸಲು ಪ್ರಯತ್ನಿಸಲಾಗುವುದು.
| ಲಕ್ಷ್ಮಣ ಸವದಿ
ಸಹಕಾರ ಸಚಿವ .
---------
ಕೋಟ್-೨
ಅರ್ಹತೆ ಇದ್ದರೂ ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ ಸಿಗುತ್ತಿಲ್ಲ. ಜಿಲ್ಲಾýಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾýಕಾರಿ ಕಚೇರಿ ಹೊರತು ಪಡಿಸಿ ಜಿಲ್ಲಾ ಮಟ್ಟದ ಎಲ್ಲ ಕಚೇರಿ ಸ್ಥಾಪಿಸಲಾಗಿದೆ. ೧೯೯೭ರಲ್ಲಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಹಲವು ಸಮಿತಿಗಳು ಶಿಪಾರಸ್ಸು ಮಾಡಿವೆ.
| ಎಸ್.ವೈ.ಹಂಜಿ
ಸಾಹಿತಿ, ಚಿಕ್ಕೋಡಿ
--------------