ನವರಾತ್ರಿ ಭಕ್ತಿಯ ಪ್ರತೀಕ

ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಂಡಿಯಾ ಸ್ಪರ್ಧೆ
ಚಿಕ್ಕೋಡಿ ತಾಲೂಕಿನ ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ನಡೆದ ದಾಂಡಿಯಾ ಸ್ಪರ್ಧೆ ಕಾರ್ಯಕ್ರಮ.
ಚಿಕ್ಕೋಡಿ ತಾಲೂಕಿನ ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ನಡೆದ ದಾಂಡಿಯಾ ಸ್ಪರ್ಧೆ ಕಾರ್ಯಕ್ರಮ.
Published on: 

ನವರಾತ್ರಿ ಎಂದರೇ ಭಕ್ತಿಯ ಪ್ರತೀಕ | ಶಿಕ್ಷಕಿ ಶ್ರೇಯಲ್ ಶಹಾ ಅಭಿಪ್ರಾಯ | ದಾಂಡಿಯಾ ಸ್ಪರ್ಧೆ ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ ಇಂದಿನ ಯುವಪೀಳಿಗೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಎಂದು ಮರೆಯದಿರಿ. ನವರಾತ್ರಿ ಎಂದರೇ ಭಕ್ತಿ,ಉತ್ಸಾಹ ಮತ್ತು ಸಂಭ್ರಮದ ಪ್ರತೀಕ ಎಂದು ನಿಪ್ಪಾಣಿಯ ಕ್ಲಾಸಿಕಲï ಡಾನ್ಸ್ ಕೆಂದ್ರದ ಶಿಕ್ಷಕಿ ಶ್ರೇಯಲ್ ಶಹಾ ಅಭಿಪ್ರಾಯಪಟ್ಟರು. ತಾಲೂಕಿನ ಶಮನೇವಾಡಿಯ ಎಜಿಎಂ ಇಂಜಿನಿಯರಿಂಗ ಕಾಲೇಜಿನಲ್ಲಿ ನವರಾತ್ರಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಗರ್ಭಾ ಮತ್ತು ದಾಂಡಿಯಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೃತ್ಯವು ಕೇವಲ ಮನೋರಂಜನೆಯಲ್ಲ, ಅದು ನಮ್ಮೆಲ್ಲರನ್ನು ಒಟ್ಟುಗೂಡಿಸುವ ಒಂದು ಮಾಧ್ಯಮ. ದಾಂಡಿಯಾ ಮತ್ತು ಗರ್ಭಾ ನೃತ್ಯಗಳು ನಮ್ಮಲ್ಲಿರುವ ಶಕ್ತಿ, ಸಾಮರಸ್ಯ ಮತ್ತು ಸಾಮೂಹಿಕ ಭಾವನೆಯನ್ನು ಹೊರಹಾಕುತ್ತವೆ. ಗೆಲುವು ಅಥವಾ ಸೋಲು ಮುಖ್ಯವಲ್ಲ. ಬದಲಿಗೆ ಈ ಹಬ್ಬದ ವಾತಾವರಣವನ್ನು ಆನಂದಿಸುವುದು ಮತ್ತು ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ಅತ್ಯಂತ ಮುಖ್ಯ ಎಂದರು. ಅಧ್ಯP್ಷÀತೆ ವಹಿಸಿದ ಪ್ರಾಚಾರ್ಯ ಡಾ.ಸಂಜಯ ಅಂಕಲಿ ಮಾತನಾಡಿ ಶಿP್ಷÀಣವೆಂದರೇ ಕೇವಲ ಪುಸ್ತಕದ e್ಞÁನವಲ್ಲ. ಅದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನೆರವಾಗುವ ಹಾದಿ.ವಿದ್ಯಾರ್ಥಿಗಳಲ್ಲಿ ಉತ್ತಮ ಶಿP್ಷÀಣದ ಜತೆಗೆ ಅವರಲ್ಲಿ ಅಡಗಿರುವ ಸೃಜನಶೀಲತೆ, ಮತ್ತು ಪ್ರತಿಭೆಯನ್ನು ಹೊರತರಲೂ ಸದಾ ಬದ್ಧವಾಗಿದೆ ಎಂದರು. ಇದೇ ವೇಳೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ಡಾ.ಸಚೀನ ಮೆಕ್ಕಳಕಿ, ಅಶ್ವಿನಿ ಫರಲಾದ, ಡಾ.ಶಶಿಕಾಂತ ವಾಳಕಿ, ಪ್ರಶಾಂತ ಶೇಡಬಾಳಕರ, ಕೆ ಆರ್ ಪಾಟೀಲ, ಸಾಗರ ಬಿರಡೆ, ಉ¯್ಲÁಸ ಮಹಿಶಾಳೆ, ಸ್ನೇಹಾ ವಾಳಕಿ, ವೈಶ್ಣವ ಶೆಗಳೆ, ಅಶ್ವಿನಿ ಮೊನಾಚಾರ್ಯ, ರಾಣಿ ಸುಟುರೆ, ರವಿ ವಾಳಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net