ದೇವರ ಆರಾಧನೆಯಿಂದ ಸಂಕಷ್ಟ ದೂರ

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಮಹಾಂತೇಶ ದೊಡಗೌಡರ ಅವರನ್ನು ಸನ್ಮಾನಿಸಲಾಯಿತು.ಜಡಿಸಿದ್ಧೇಶ್ವರ ಸ್ವಾಮೀಜಿ, ಮುರುಗಯ್ಯ ಕಲ್ಮಠ, ಆನಂದ ಮುಗದೈನವರಮಠ ಇತರರಿದ್ದರು.
ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಮಹಾಂತೇಶ ದೊಡಗೌಡರ ಅವರನ್ನು ಸನ್ಮಾನಿಸಲಾಯಿತು.ಜಡಿಸಿದ್ಧೇಶ್ವರ ಸ್ವಾಮೀಜಿ, ಮುರುಗಯ್ಯ ಕಲ್ಮಠ, ಆನಂದ ಮುಗದೈನವರಮಠ ಇತರರಿದ್ದರು.
Published on

ಮಠ-ಮಂದಿರಗಳು ಭಕ್ತಿ ಹಾಗೂ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರದ್ಧಾ, ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು.

ಗಾಂಧಿ ನಗರದ ಚನ್ನಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಚನ್ನಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣ-ಪ್ರವಚನಗಳನ್ನು ಆಲಿಸುವ ಮೂಲಕ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ದೊಡವಾಡ ಹಿರೇಮಠದ ಜಡಿಸಿದ್ಧೇಶ್ವರ ಸ್ವಾಮೀಜಿ, ಮುರುಗಯ್ಯ ಕಲ್ಮಠ, ಆನಂದ ಮುಗದೈನವರಮಠ, ಪಪಂ ಅಧ್ಯಕ್ಷ ಸುರೇಶ ಮುತ್ನಾಳ, ಸದಸ್ಯ ದೊಡ್ಡಪ್ಪ ಗಣಾಚಾರಿ, ಮಲ್ಲಪ್ಪ ನಾಗನೂರ, ವಿನಾಯಕ ಜಂಗಳಿ, ಸುರೇಶ ದೇಸಾಯಿ, ಅಶೋಕ ಕಲ್ಯಾಣಿ, ರಮೇಶ ಚಳ್ಳಮರದ, ಸಂಜು ತಿಲಗರ, ಉಮೇಶ ದೇವಲತ್ತಿ, ಬಸಯ್ಯ ವಿಭೂತಿಮಠ, ಮಲ್ಲಯ್ಯ ಹಿರೇಮಠ, ಮಹಾಂತೇಶ ಸಂಬಣ್ಣವರ, ಕೃಷ್ಣ ಆದೆನ್ನವರ, ಸದಾಶಿವ ಬಾಗೇವಾಡಿ, ಸಿದ್ರಾಮ ಮುಗಳಿ, ಹನುಮಂತ ಆದೆನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net