ತಲಾ 1 ಕೋಟಿ ರೂ. ಪರಿಹಾರ ನೀಡಲು ಪ್ರತಿಭಟನೆ

ಪ್ರತಿಭಟನೆ
ಪ್ರತಿಭಟನೆ
Published on
ಬೈಲಹೊಂಗಲ: ತಾಲೂಕಿನ ಮರಕುಂಬಿ ಸಕ್ಕರೆ ಕಾರ್ಖಾನೆಯಲ್ಲಿ ವಾಲ್ ದುರಸ್ತಿ ವೇಳೆ ಬಿಸಿ ಪದಾರ್ಥ ಮೈಮೇಲೆ ಬಿದ್ದು ಮೃತಪಟ್ಟಿರುವ ಎಂಟು ಕಾರ್ಮಿಕರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳ ನಾಯಕರು, ಅರವಳ್ಳಿ ಗ್ರಾಮಸ್ಥರು ಹಾಗೂ ಮೃತರ ಕುಟುಂಬಸ್ಥರು ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದರು.
ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಎಂಟು ಜನ ಕಾರ್ಮಿಕರು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಕಾರ್ಖಾನೆ ವ್ಯವಸ್ಥಾಪಕ ರವೀಂದ್ರ ಪಟ್ಟಣಶೆಟ್ಟಿ ಅವರು ಕಾರ್ಖಾನೆ ವತಿಯಿಂದ ತಲಾ 15 ಲಕ್ಷ ರೂ. ಪರಿಹಾರ ಘೋಷಿಸಿದರು. ಆದರೆ ಪ್ರತಿಭಟನಾಕಾರರು ಇದನ್ನು ತಿರಸ್ಕರಿಸಿ ತಲಾ 1 ಕೋಟಿ ರೂ. ನೀಡಲೇಬೇಕೆಂದು ಪಟ್ಟು ಹಿಡಿದರು.ಇದರಿಂದ ಪ್ರತಿಭಟನೆ ತೀವ್ರಗೊಂಡಿತು.
ಇದರಿಂದ ಕೆಲಹೊತ್ತು ಸಂಚಾರ ಸಿಕ್ಕು ಉಂಟಾಯಿತು. ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ, ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ಸಿಬ್ಬಂದಿ ಭೇಟಿ ನೀಡಿದರು. ಬಳಿಕ ನಡೆದ ಮಾತುಕತೆಯಲ್ಲಿ 18 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಯಿತು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ, ಸಿಪಿಐ ಪ್ರಮೋದ ಯಲಿಗಾರ, ತಹಸೀಲ್ದಾರ್ ಎಚ್.ಎಚ್.ಶಿರಹಟ್ಟಿ, ರೈತ ಸಂಘಟನೆಗಳ ಮುಖಂಡರಾದ ಮಹಾಂತೇಶ ಕಮತ, ಚೂನಪ್ಪ ಪೂಜೇರಿ, ಮಲ್ಲಿಕಾರ್ಜುನ ಹುಂಬಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net