ಬೆಳಗಾವಿ ಕನ್ನಡ ಭವನದಲ್ಲಿ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ನಾಟಕ ಪ್ರದರ್ಶನವನ್ನು ಪ್ರವೀಣ ಹುಲಜಿ ಉದ್ಘಾಟಿಸಿದರು. ಬಸನಗೌಡ ಕಾಮನಗೌಡರ, ಪುಂಡಲೀಕ, ರಮೇಶ ಜಂಗಲ, ಪ್ರೊ.ಬಿ.ಎಸ್.ಗವಿಮಠ, ಎಂ.ಕೆ.ಹೆಗಡೆ ಇತರರಿದ್ದರು.
Published on:
Copied
Follow Us
ಬೆಳಗಾವಿ: ಜನ ಸಮುದಾಯವನ್ನು ಮೊಬೈಲ್ ಗೀಳಿನಿಂದ ಹೊರತಂದು ಜೀವನೋತ್ಸಾಹ ತುಂಬುವ ನಾಟಕಗಳ ಅಗತ್ಯವಿದೆ. ಎಂದು ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿ ಯರ್ ಪ್ರವೀಣ ಹುಲಜಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಕಲಾವಿದರು ಪ್ರಸ್ತುತಪಡಿಸಿದ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಬಸವರಾಜ ಕಾಮಗಾರಕರ, ಉದ್ಯಮಿ ಪುಂಡಲೀಕ, ಡಾ.ರಾಮಕೃಷ್ಣ ಮರಾಠೆ, ಶೈಲಜಾ ಭಿಂಗೆ, ಬಿ.ಎಸ್.ಗವಿಮಠ, ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ, ಪ್ರಸಾದ ಪಂಡಿತ, ಶಶಿಧರ ಹೊಸಕೋಟೆ ಇತರರಿದ್ದರು.
ಎಂ.ಎಸ್.ನರಸಿಂಹಮೂರ್ತಿ ರಚನೆಯ ನಾಟಕವನ್ನು ಶರಣಗೌಡ ಪಾಟೀಲ ನಿರ್ದೇಶಿಸಿ, ಸಂಗೀತ, ರಂಗ ಮತ್ತು ಬೆಳಕಿನ ವಿನ್ಯಾಸ ನಿರ್ವಹಿಸಿದರು. ವಾಮನ ಮಳಗಿ, ಶಾಂತಾ ಆಚಾರ್ಯ, ಶಿರೀಷ ಜೋಶಿ, ವಿಶ್ವನಾಥ ದೇಸಾಯಿ, ಅನುಶ್ರೀ ರಘುವೀರ, ಶರಣಯ್ಯ ಮಠಪತಿ ಅಭಿನಯಿಸಿದರು. ಗುರುದತ್ತ ಪೆಡ್ನೆಕರ್ ನೆರಳು-ಬೆಳಕಿನ ವಿನ್ಯಾಸ ನೀಡಿದರು. 50 ನಿಮಿಷದ ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.