ಧರ್ಮ ಪಾಲನೆಯಿಂದ ಜೀವನ ಸಾರ್ಥಕ

 ತಲ್ಲೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ದೀಪಕ ಸ್ವಾಮಿ, ನಂದಿಮಠದ ಬಾಳಯ್ಯಜ್ಜ, ಮಹಾರುದ್ರಪ್ಪ ಉಪ್ಪಿನ ಇತರರಿದ್ದರು.
ತಲ್ಲೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ದೀಪಕ ಸ್ವಾಮಿ, ನಂದಿಮಠದ ಬಾಳಯ್ಯಜ್ಜ, ಮಹಾರುದ್ರಪ್ಪ ಉಪ್ಪಿನ ಇತರರಿದ್ದರು.
Published on

ಆಧುನಿಕ ಭರಾಟೆಯಲ್ಲಿ ಧರ್ಮದ ಹಾದಿ ಮರೆಯುತ್ತಿದ್ದೇವೆ. ಭಕ್ತರು ಧರ್ಮದ ಹಾದಿಯಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಸ್ಥಳೀಯ ತೋರಗಲ್ಲಮಠದ ದೀಪಕ ಸ್ವಾಮಿ ಹೇಳಿದರು.

ಗ್ರಾಮದಲ್ಲಿ ನೂಲು ಹುಣ್ಣಿಮೆ ಹಾಗೂ ಶ್ರಾವಣ ಮಾಸದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.
ನಂದಿಮಠದ ಬಾಳಯ್ಯಜ್ಜ ಮಾತನಾಡಿ, ಮನುಷ್ಯ ದಾನ, ಧಾರ್ಮಿಕ ಕಾರ್ಯಗಳ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಬೆಳಗ್ಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಬಳಿಕ ಆನಿಗೋಳ, ಬೈಲಹೊಂಗಲ, ಗೊಡಚಿ ಪುರವಂತರಿಂದ ಶಸಗಳ ಪ್ರದರ್ಶನ, ಆರತಿಯೊಂದಿಗೆ ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿತು.
ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಅರ್ಚಕ ಬಸಯ್ಯ ಮಠಪತಿ, ಈರಯ್ಯ ಶಾಸಿ, ಶಿವಪ್ಪ ಹೂಗಾರ, ಜಗದೀಶ ಹೊಸಮಠ, ಶಂಕರ ಬಡಿಗೇರ, ಬಾಳಯ್ಯ ಮಾಸ್ತಮರಡಿ, ಮಲ್ಲಪ್ಪ ಯರಗಟ್ಟಿ, ಬಸವರಾಜ ಸರದಾರ, ನಿಂಗಪ್ಪ ದೊಡವಾಡ, ಎಂ.ವಿ.ಉಪ್ಪಿನ, ಶಿವಯೋಗಿ ಬಡಿಗೇರ, ಮಂಜುಳಾ ತೋರಗಲ್ಲಮಠ, ರೇಣುಕಾ ಹಂಜಿ, ಪ್ರಕಾಶ ಯರಗಟ್ಟಿ, ರಾಜು ಹೊಸವಾಳ, ಈರಣ್ಣ ಕಾಜಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net