ನಗರದ ಗಣೇಶಪುರದ ವಿನಾಯಕ ನಗರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಡಾ.ಅಶೋಕ ಅಲತಗಿ, ಡಾ.ಜೀವನ್ ಜೋಶಿ, ಡಾ.ಟ್ವಿಂಕಲ್ ಬೆಹ್ಲ್, ಡಾ.ಕಮಲಾ, ವಿಜಯಕುಮಾರ ಮುನವಳ್ಳಿ, ಮಹಾದೇವ ವಾಲಿಶೆಟ್ಟಿ ಇತರರಿದ್ದರು.
ಬೆಳಗಾವಿ: ರಕ್ತದಾನ ಶ್ರೇಷ್ಠ ಕಾರ್ಯವಾಗಿದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧೀಕರಣ ಆಗುವುದಲ್ಲದೆ, ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಡಾ.ಸ್ವಪ್ನಾ ಮಹಾಜನ್ ಹೇಳಿದರು.
ಇಲ್ಲಿನ ಗಣೇಶಪುರದ ವಿನಾಯಕ ನಗರದಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹನುಮಾನ ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಟಿಜೆಎಸ್‌ಬಿ ಸಹಕಾರ ಬ್ಯಾಂಕ್ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಶಿಬಿರದಲ್ಲಿ ಒಟ್ಟು 65ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಲಾಯಿತು. 92ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಪ್ರಯೋಜನ ಪಡೆದರು.
ಆಸ್ಪತ್ರೆ ಪ್ರಯೋಗಾಲಯ ಮತ್ತು ರಕ್ತ ಕೇಂದ್ರದ ಮುಖ್ಯಸ್ಥ ಡಾ.ಅಶೋಕ ಅಲತಗಿ, ವೈದ್ಯಾಧಿಕಾರಿ ಡಾ.ಜೀವನ್ ಜೋಶಿ, ಡಾ.ಟ್ವಿಂಕಲ್ ಬೆಹ್ಲ್, ಡಾ.ಕಮಲಾ, ವಿಜಯಕುಮಾರ ಮುನವಳ್ಳಿ, ಮಹಾದೇವ ವಾಲಿಶೆಟ್ಟಿ, ದಿನೇಶ ಪಾಟೀ, ಪ್ರಮೋದ ದೇಶಪಾಂಡೆ, ಡಾ.ಎಚ್.ಬಿ.ರಾಜಶೇಖರ, ನವೀನ ಎನ್., ಡಾ.ಸಂಜ ಕಂಬಾರ ಇತರರಿದ್ದರು.