ಜಂಗೀ ನಿಖಾಲಿ ಕುಸ್ತಿಗೆ ಚನ್ನರಾಜ ಚಾಲನೆ

ಹಿರೇಬಾಗೇವಾಡಿ ಫಡಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗೆ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು. ಗ್ರಾಮದ ಮುಖಂಡರು ಇದ್ದರು.
ಹಿರೇಬಾಗೇವಾಡಿ ಫಡಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗೆ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು. ಗ್ರಾಮದ ಮುಖಂಡರು ಇದ್ದರು.
Published on
ಹಿರೇಬಾಗೇವಾಡಿ: ಇಲ್ಲಿನ ಫಡಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಭಾರಿ ಜಂಗೀ ನಿಖಾಲಿ ಕುಸ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಸ್ತಿಯಂತಹ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಕ್ಷ್ಮೀತಾಯಿ ಫೌಂಡೇಷನ್ ಎಲ್ಲ ಸಹಾಯ, ಸಹಕಾರ ನೀಡುತ್ತಿದೆ. ಗ್ರಾಮೀಣ ಕ್ಷೇತ್ರದಲ್ಲಿ ಶೀಘ್ರದಲ್ಲೇ ಕುಸ್ತಿ ಅಖಾಡ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಫಡಿಬಸವೇಶ್ವರ ಮಂದಿರದಿಂದ ಸ್ಮಶಾನವರೆಗೆ 1 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net