ರಫ್ತು ಉದ್ಯಮಕ್ಕೆ ಬೆಳಗಾವಿ ಉತ್ತಮ ಸ್ಥಳ

ಬೆಳಗಾವಿಯಲ್ಲಿ ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸ್ವಪ್ನಿಲ್ ಶಹಾ, ಸತ್ಯನಾರಾಯಣ ಭಟ್, ನಿತಿನ ಲಾಂಡಗೆ, ಅನುರಾಗ ಅಗ್ರಹಾರಿ ಇತರರು ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸ್ವಪ್ನಿಲ್ ಶಹಾ, ಸತ್ಯನಾರಾಯಣ ಭಟ್, ನಿತಿನ ಲಾಂಡಗೆ, ಅನುರಾಗ ಅಗ್ರಹಾರಿ ಇತರರು ಪಾಲ್ಗೊಂಡಿದ್ದರು.
Published on

ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶವಿದೆ. ಉದ್ಯಮಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಘದ(ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹಾ ಹೇಳಿದರು.

ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಬೆಳಗಾವಿಯಲ್ಲಿ 150ಕ್ಕೂ ಹೆಚ್ಚು ರಫ್ತು ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕೇವಲ 35 ಉದ್ಯಮಿಗಳು ಮಾತ್ರ ಕ್ರಿಯಾಶೀಲರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆಮದು ಮತ್ತು ರಫ್ತು ತರಬೇತಿ ಕನ್ಸಲ್ಟಂಟ್ ತಾಸಿನ್ ಎಂ.ಎಂ. ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ರಿಟೇಲ್ ಟ್ರೇಡ್ ಫಾರೆಕ್ಸ್ ಉಪಾಧ್ಯಕ್ಷ ಕೆ.ರಂಗನಾಥ, ಶಾಖಾ ವ್ಯವಸ್ಥಾಪಕ ಸಿದ್ರಾಮ ಕುರಬೇಟ ಉಪನ್ಯಾಸ ನೀಡಿದರು.
ರಿಟೇಲ್ ಟ್ರೇಡ್ ಆ್ಯಂಡ್ ಫಾರೆಕ್ಸ್ ಪ್ರಾದೇಶಿಕ ಉಪಾಧ್ಯಕ್ಷ ಅನುರಾಗ ಅಗ್ರಹಾರಿ, ಸಂದೀಪ ಬಾಗೇವಾಡಿ, ಬಸವರಾಜ ರಾಂಪುರೆ, ಮನೋಜ ಮತ್ತಿಕೊಪ್ಪ, ರಾಜೇಂದ್ರ ಮುತಗೇಕರ, ಎಂ.ಕೆ.ಹೆಗಡೆ, ರೋಹಿತ ಕಪಾಡಿಯಾ, ವಿನೀತ ಹರಕುಣಿ, ವಿಜಯ ದರಗಶೆಟ್ಟಿ, ಅಶೋಕ ಕೋಳಿ, ಅಶೋಕ ಕಾಟವೆ, ಸದಾಶಿವ ವಿನೀತ ಇತರರಿದ್ದರು. ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿತಿನ ಲಾಂಡಗೆ ಸ್ವಾಗತಿಸಿದರು.
ವೈಭವ ಯಾದವ ನಿರೂಪಿಸಿದರು. ಸಂಘದ ಗೌರವ ಕಾರ್ಯದರ್ಶಿ ಸತೀಶ ನೆರ್ಲೇಕರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net