ಅರಿಹಂತ ಸೊಸೈಟಿಗೆ 18.32 ಕೋಟಿ ರೂ. ಪ್ರಾಫಿಟ್

ಬೋರಗಾಂವ ಪಟ್ಟಣದ ಅರಿಹಂತ ಸೊಸೈಟಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಭಿನಂದನ ಪಾಟೀಲ ಮಾತನಾಡಿದರು. ಉತ್ತಮ ಪಾಟೀಲ, ಅಶೋಕ ಬಂಕಾಪೂರೆ ಇದ್ದರು.
ಬೋರಗಾಂವ ಪಟ್ಟಣದ ಅರಿಹಂತ ಸೊಸೈಟಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಭಿನಂದನ ಪಾಟೀಲ ಮಾತನಾಡಿದರು. ಉತ್ತಮ ಪಾಟೀಲ, ಅಶೋಕ ಬಂಕಾಪೂರೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಅಭಿನಂದನ ಪಾಟೀಲ ಮಾಹಿತಿ
  • ಶೀಘ್ರ ಗೋವಾದಲ್ಲೂ ಶಾಖೆ
ಬೋರಗಾಂವ: ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬಾಗಿ, ಬೋರಗಾಂವ ಅರಿಹಂತ ಕ್ರೆಡಿಟ್ ಸೊಸೈಟಿ 2025-26ನೇ ಸಾಲಿನಲ್ಲಿ 1,726 ಕೋಟಿ ರೂ. ಠೇವಣಿ ಸಂಗ್ರಹಣೆ ಮೂಲಕ 18.32 ಕೋಟಿ ರೂ. ಲಾಭ ಗಳಿಸಿದೆ ಎಂದು ಸೊಸೈಟಿ ಚೇರ್ಮನ್ ಅಭಿನಂದನ ಪಾಟೀಲ ಹೇಳಿದರು.
ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 61 ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಒಟ್ಟು 2,342 ಸದಸ್ಯರನ್ನು ಹೊಂದಿದ್ದು, 7.01 ಕೋಟಿ ರೂ. ಷೇರು ಬಂಡವಾಳ, 110.89 ಕೋಟಿ ರೂ. ನಿಧಿಗಳು, 617 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ, 1,862 ಕೋಟಿ ರೂ. ದುಡಿಯುವ ಬಂಡವಾಳ,1,726 ಕೋಟಿ ರೂ. ಠೇವಣಿ ಸಂಗ್ರಹಿಸಿ 1,255 ಕೋಟಿ ರೂ. ಸಾಲ ಮತ್ತು 18.32 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಮಹಾರಾಷ್ಟ್ರ, ಪುಣೆ, ಕೊಲ್ಲಾಪುರ, ಸಾಂಗಲಿ, ಸಾತಾರ ಹಾಗೂ ಬೈಲಹೊಂಗಲ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಶಾಖೆ ಪ್ರಾರಂಭಿಸಿ, ಶೀಘ್ರದಲ್ಲೇ ಗೋವಾ ರಾಜ್ಯಕ್ಕೂ ವಿಸ್ತರಿಸಲಾಗುವುದು ಎಂದರು.
ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಸಂಸ್ಥೆ ಸಂಸ್ಥಾಪಕ ದಿ.ರಾವಸಾಹೇಬ ಪಾಟೀಲ ದಾದಾ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುಂದುವರಿಯುತ್ತಿದೆ. ಎಲ್ಲರ ವಿಶ್ವಾಸ ಮತ್ತು ಸಹಕಾರದಿಂದಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಠೇವಣಿ 268 ಕೋಟಿ ರೂ. ಹೆಚ್ಚಾಗಿದೆ. ನಾವು ಬಹುರಾಜ್ಯದ ಮೂಲಕ ಹತ್ತಿರದ ಮಹಾರಾಷ್ಟ್ರದಲ್ಲಿಯೂ ಸೇವೆ ಒದಗಿಸುತ್ತಿದ್ದೇವೆ. ಸಂಸ್ಥೆ ಸಾಧನೆಯಲ್ಲಿ ಸದಸ್ಯರು, ಠೇವಣಿದಾರರು ಮತ್ತು ಸಿಬ್ಬಂದಿ ಸಹಕಾರ ನೀಡಿದ್ದಾರೆ ಎಂದರು.
ಉಪಾಧ್ಯಕ್ಷ ಸತೀಶ ಪಾಟೀಲ, ಸಿಇಒ ಅಶೋಕ ಬಂಕಾಪೂರೆ, ಸಂಚಾಲಕ ಸುಭಾಸ ಶೆಟ್ಟಿ, ಅಭಯಕುಮಾರ ಕರೋಲೆ, ಜಯಪಾಲ ನಾಗಾವೆ, ಪ್ರಹ್ಲಾದ ಕಡೋಲೆ, ಪಿರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಶರದಕುಮಾರ ಲಡಗೆ, ಬಾಬಾಸಾಹೇಬ ಅರಾಜ, ಶ್ರೀಕಾಂತ ವಸವಾಡೆ, ಸಂದೀಪ ಪಾಟೀಲ, ಶಿವಾನಂದ ರಾಜಮಾನೆ, ಅನಿತಾ ಮಗದುಮ್ಮ, ನಿರ್ಮಲಾ ಬಳ್ಳೊಳೆ, ಸಹ ವ್ಯವಸ್ಥಾಪಕ ಅಭಿನಂದನ ಬೆನಾಡೆ, ಅಭಯ ಖೋತ, ಭರತ ಗುಂಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net