ನಿಪ್ಪಾಣಿ: ಅಭಿವೃದ್ಧಿಯ ಮೂಲಕ ಕ್ಷೇತ್ರವನ್ನು ಸಮೃದ್ಧಗೊಳಿಸುವುದು ಗುರಿಯಾಗಿದ್ದು, ಇದಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು. ಸಮೀಪದ ಯಮಗರ್ಣಿ- ನಾಗನೂರು-ಶಿರ್ಪೆವಾಡಿಯ 3 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜನರ ಅನುಕೂಲಕ್ಕಾಗಿ ರಸ್ತೆ ಕಾಮಗಾರಿಗೆ 1.10 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಕೆ.ಡಿ.ಕುಂಬಾರ, ಹಾಲಶುಗರ್ರ್ ಅಧ್ಯಕ್ಷ ಎಂ.ಪಿ.ಪಾಟೀಲ, ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಾಳಸಾಹೇಬ ಕದಂ, ಹಾಲಶುಗರ್ರ್ ನಿರ್ದೇಶಕ ಸುಮಿತ ಸಾಸನೆ, ಪ್ರಕಾಶ ಶಿಂಧೆ, ಸುಹಾಸ ಗುಗೆ, ಜಿಪಂ ಮಾಜಿ ಸದಸ್ಯ ಸಿದ್ದು ನರಾಟೆ, ಗ್ರಾಪಂ ಮಾಜಿ ಅಧ್ಯಕ್ಷ ನಾಸೀರ್‌ಖಾನ್ ಇನಾಮದಾರ ಇತರರಿದ್ದರು.