ಬೆಲ್ಲದ ಬಾಗೇವಾಡಿ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ವಿಜೇತರಿಗೆ ಶಾಸಕ ನಿಖಿಲ ಕತ್ತ್ತಿ ಮತ್ತು ಪವನ ಕತ್ತಿ ಬಹುಮಾನ ವಿತರಿಸಿದರು. ಬಸವರಾಜ ಪಾಟೀಲ, ದೀಪಕ ಮುರಗಾಲಿ, ಅಶೋಕ ಪಾಟೀಲ ಇತರರಿದ್ದರು.
ಹುಕ್ಕೇರಿ: ಕುಸ್ತಿ ಶಕ್ತಿ ಸಂಕೇತ. ಸೋಲು-ಗೆಲುವು ಬಗ್ಗೆ ತಲೆಕೆಡಸಿಕೊಳ್ಳದೆ ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ನಿರ್ಮಿಸಿದ ಆಧುನಿಕ ಕುಸ್ತಿ ಮೈದಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾಮೇಶ ಪಾಟೀಲ ಪ್ರಥಮ, ಕಂಗ್ರಾಳಿಯ ಶಿವಾನಂದ ನಿರ್ವಾನಟ್ಟಿ ದ್ವಿತೀಯ, ಬೆಳಗಾವಿಯ ದಯಾನಂದ ಶಿರಗಾಂವಿ ಮತ್ತು ಹನುಮಂತ ಘಟಪ್ರಭಾ ತೃತೀಯ, ಸಂಜಯ ಇಂಗಳಿ ಚತುರ್ಥ, ಘೋಡಗೇರಿಯ ಸಚಿನ ಪೂಜೇರಿ ಹಾಗೂ ದಯಾನಂದ ಇಂಗಳಿ ಐದನೇ ಸ್ಥಾನ ಪಡೆದರು.
ವಿಜೇತರಿಗೆ ವಿಶ್ವರಾಜ ಸಕ್ಕರೆ ಕಾರ್ಖಾನೆಯಿಂದ ಕೊಡಮಾಡಿದ ಬಹುಮಾನಗಳನ್ನು ಶಾಸಕ ನಿಖಿಲ ಕತ್ತಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಸಹಕಾರ ಧುರೀಣ ಪವನ ಕತ್ತಿ ವಿತರಿಸಿದರು.
ತಿರ್ಪುಗಾರರಾಗಿ ಬಸವರಾಜ ಪಾಟೀಲ, ದೀಪಕ ಮುರಗಾಲಿ, ಅಶೋಕ ಪಾಟೀಲ ಕಾರ್ಯನಿರ್ವಹಿಸಿದರು.