ಕುಂದಾನಗರಿಯಲ್ಲಿ ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ ಆರಂಭ

ಬೆಳಗಾವಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಾ.ಹಿತಾ ಮಣಾಲ್ ಹೆಬ್ಬಾಳ್ಕರ್ ಆರಂಭಿಸಿರುವ ಸ್ಕಿನ್ ಆ್ಯಂಡ್ ಹೇರ್ ಕೇರ್ ಕ್ಲಿನಿಕ್ ಉದ್ಘಾಟಿಸಿದರು. ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಮಣಾಲ್ ಹೆಬ್ಬಾಳ್ಕರ್ ಇದ್ದರು.
ಬೆಳಗಾವಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಾ.ಹಿತಾ ಮಣಾಲ್ ಹೆಬ್ಬಾಳ್ಕರ್ ಆರಂಭಿಸಿರುವ ಸ್ಕಿನ್ ಆ್ಯಂಡ್ ಹೇರ್ ಕೇರ್ ಕ್ಲಿನಿಕ್ ಉದ್ಘಾಟಿಸಿದರು. ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಮಣಾಲ್ ಹೆಬ್ಬಾಳ್ಕರ್ ಇದ್ದರು.
Published on
ಬೆಳಗಾವಿ: ನಗರದ ಕಾಲೇಜು ರಸ್ತೆಯ ಹೋಟೆಲ್ ಸನ್ಮಾನ್ ಹಿಂಭಾಗದಲ್ಲಿರುವ ದಾಸಪ್ಪ ಶಾನಭಾಗ್ ಎಂಪೈಯರ್‌ನಲ್ಲಿ ಡಾ. ಹಿತಾ ಮಣಾಲ್ ಹೆಬ್ಬಾಳ್ಕರ್ ಆರಂಭಿಸಿರುವ ಸ್ಕಿನ್ ಆ್ಯಂಡ್ ಹೇರ್ ಕೇರ್ ಕ್ಲಿನಿಕ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಉದ್ಘಾಟಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಹಿತಾ ಅವರು ಬಹಳಷ್ಟು ಅಧ್ಯಯನ ಮಾಡಿದ್ದು, ಅತ್ಯಾಧುನಿಕ ಯಂತ್ರೋಪಕರಣ ತರಿಸಿದ್ದಾರೆ. ನೂತನ ಕ್ಲಿನಿಕ್ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆರೋಗ್ಯ ಕಾಳಜಿ ಇಟ್ಟುಕೊಂಡು ಕೆಲಸ ಮಾಡಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕೆಂದು ವಿನಂತಿಸುತ್ತೇನೆ. ಕ್ಲಿನಿಕ್ ಯಶಸ್ವಿಯಾಗಿ ಮುನ್ನಡೆಯಲಿ, ಡಾ. ಹಿತಾ ಅವರು ಕಟ್ಟಿಕೊಂಡಿರುವ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮಣಾಲ್ ಹೆಬ್ಬಾಳ್ಕರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net