ಒಗ್ಗಟ್ಟಿನಿಂದ ನಿರೀಕ್ಷೆಗೂ ಮೀರಿ ಅಭಿವೃದ್ಧಿ

Basanagowda Patil Yatnal, Vijayapura, Assembly Election, Ayyappa Temple, Maratha Society,
ವಿಜಯಪುರ ನಗರದ ಟ್ರೇಜರಿ ಕಾಲನಿ ಬಳಿ ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ರಾಹುಲ್ ಜಾಧವ, ವಿಜಯಕುಮಾರ ಚವ್ಹಾಣ, ಶಂಕರ ಕನಸೆ ಮತ್ತಿತರರಿದ್ದಾರೆ.
Published on

ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ನಡೆಸಿದರೂ ಯಾರ ಆಟವು ನಡೆಯಲಿಲ್ಲ. ಹಿಂದಿನ ಚುನಾವಣೆಗಿಂತಲೂ ಅಧಿಕ ಮತಗಳಿಂದ ಗೆಲುವು ಸಾಧಿಸಿದೆ. ನಮ್ಮಲ್ಲಿರುವ ಒಗ್ಗಟ್ಟಿನಿಂದಾಗಿ ನಗರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ವಾರ್ಡ್ ನಂ. 15 ರ ವ್ಯಾಪ್ತಿಯ ಟ್ರೇಜರಿ ಕಾಲನಿಯ ಅಯ್ಯಪ್ಪ ದೇವಸ್ಥಾನ ಬಳಿ ಭಾನುವಾರ 2020-21ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಿದ 10 ಲಕ್ಷ ರೂ.ಗಳ ಅನುದಾನದಲ್ಲಿ ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾನು ಮತ್ತೇ ಗೆಲವು ಸಾಧಿಸಿದ ಫಲವಾಗಿ ಎಂದೂ ಅಭಿವೃದ್ಧಿ ಕಾಣದ ಬಡಾವಣೆ, ಕಾಲನಿಗಳು ಸೇರಿ ನಗರದ ಒಳ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಅದರಿಂದ ನಮ್ಮ ನಗರ ಧೂಳು ಮುಕ್ತವಾಗಿವಾಗಿದ್ದು, ನಿವೇಶನಗಳ ಮೌಲ್ಯ ಸಹ ದ್ವಿಗುಣಗೊಂಡಿವೆ. ಪ್ರತಿಯೊಂದು ಸಮಾಜದ ಅಭಿವೃದ್ಧಿಗೂ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿ, ಸಮುದಾಯ ಭವನ ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ ಚವ್ಹಾಣ, ಕಾರ್ಯದರ್ಶಿ ರಾಹುಲ್ ಜಾಧವ, ಸಹ ಕಾರ್ಯದರ್ಶಿ ಶಂಕರ ಕನಸೆ, ಖಜಾಂಚಿ ರಾಜು ಮೋರೆ, ಸದಸ್ಯರಾದ ವಸಂತ ಬುರ್ಕೆ, ಸಿದ್ದೋಬಾ ಚವ್ಹಾಣ, ಉಮೇಶ ಚವ್ಹಾಣ, ಬಾಳಕೃಷ್ಣ ಪವಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net