ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಂಚನೆ

CYBER CRIME
Published on

ಗೋಕರ್ಣ: ಇಂಟರ್‌ನೆಟ್ ಮೂಲಕ ಬ್ಯಾಂಕ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡಿ 4.83 ಲಕ್ಷ ರೂ. ಲಪಟಾಯಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ಶೋರೂಂ ಮಾಲೀಕ ಕೃಷ್ಣಾನಂದ ಶಿವಾನಂದ ಗೌಡ ಹಣ ಕಳೆದುಕೊಂಡವರು. ಇವರ ಕೆನರಾ ಬ್ಯಾಂಕ್ ಖಾತೆಯಿಂದ 4.83 ಲಕ್ಷ ರೂ. ಲಪಟಾಯಿಸಲಾಗಿದ್ದು ಏಳು ಬಾರಿ ನಿರಂತರವಾಗಿ ಖಾತೆಯಿಂದ ಹಣ ತೆಗೆಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net