ತಾಯಿಯ ಹಾಲು ಮಗುವಿಗೆ ಅಮೃತ

ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಮಕ್ಕಳ ತಜ್ಞ ಡಾ.ನಿರಂಜನ ಚಾಲನೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಸಿಂಧುಶ್ರೀ, ರವಿ ಕುಮಾರ್, ಶುಶ್ರೂಷಕ ಅಧಿಕಾರಿಗಳಾದ ಮಹೇಶ್, ಮಲ್ಲಿಕಾರ್ಜುನ, ಪ್ರೇಮಾ, ಚೌಡಮ್ಮ, ಪ್ರಯೋಗಶಾಲಾ ತಂತ್ರಜ್ಞರಾದ ಸತೀಶ್, ಸೋಮಶೇಖರ, ಸುನಿಲ್ ಕುಮಾರ್, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ್ ಕುಮಾರ್, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ತಜ್ಞ ಡಾ.ನಿರಂಜನ ಹೇಳಿಕೆ
  • ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಕೂಡ್ಲಿಗಿ: ತಾಯಿಯ ಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಯಾವುದೇ ಮೂಢನಂಬಿಕೆಗೆ ಒಳಗಾಗದೇ ತಾಯಂದಿರು ಎದೆ ಹಾಲುಣಿಸಿ ಎಂದು ಮಕ್ಕಳ ತಜ್ಞ ಡಾ.ನಿರಂಜನ ಹೇಳಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿಯ ಹಾಲು ಅಮೃತ ವಿದ್ದಂತೆ. ಮಗುವಿಗೆ ಆರು ತಿಂಗಳವರೆಗೆ ತಾಯಿಯ ಎದೆ ಹಾಲು ಮಾತ್ರ ನೀಡಬೇಕು.
ತಾಯಿಯ ಎದೆ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಸಕಾಲದಲ್ಲಿ ಮಗುವಿಗೆ ಸರಿಯಾದ ಲಸಿಕೆಗಳನ್ನು ಹಾಕಿಸಬೇಕು ಎಂದರು. ಸಾರ್ವಜನಿಕ ಆಸ್ಪತ್ರೆ ವೈದ್ಯೆ ಸಿಂಧುಶ್ರೀ ಮಾತನಾಡಿ, ಬಾಣಂತಿಯರು ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು. ಹಸಿರು ತರಕಾರಿ, ಸೊಪ್ಪು, ಮೊಟ್ಟೆ, ಮೀನು ಸೇವಿಸಿದರೆ ತಾಯಿ ಎದೆ ಹಾಲು ಹೆಚ್ಚಾಗುತ್ತದೆ. ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ನಂತರ ಬಾಣಂತಿಯರಿಗೆ ಹಣ್ಣುಗಳನ್ನು ವಿತರಿಸಿಲಾಯಿತು.
ಶುಶ್ರೂಷಕ ಅಧಿಕಾರಿಗಳಾದ ಮಹೇಶ್, ಮಲ್ಲಿಕಾರ್ಜುನ, ಪ್ರೇಮಾ, ಚೌಡಮ್ಮ, ಪ್ರಯೋಗಶಾಲಾ ತಂತ್ರಜ್ಞರಾದ ಸತೀಶ್, ಸೋಮಶೇಖರ, ಸುನಿಲ್ ಕುಮಾರ್, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ್ ಕುಮಾರ್, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net