ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಲಿ

ಸಹಾಯಕ ಕುಲಸಚಿವ ಡಾ. ರಮೇಶ್ ಜಿ.ಎಚ್. ಹೇಳಿಕೆ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 1,000ಕ್ಕೂ ಹೆಚ್ಚು ವೈದ್ಯರು ಭಾಗಿ
ಬಾಗಲಕೋಟೆಯಲ್ಲಿ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನಕ್ಕೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮೌಲ್ಯಮಾಪನ ವಿಭಾಗದ ಸಹಾಯಕ ಕುಲಸಚಿವ ಡಾ. ರಮೇಶ್ ಜಿ.ಎಚ್. ಚಾಲನೆ ನೀಡಿದರು. ಡಾ. ಶ್ರೀಕಾಂತ ಕೊಂಕಣಿ, ಮಹೇಶ ಅಥಣಿ, ಅಶೋಕ ಸಜ್ಜನ ಇತರರಿದ್ದರು.
ಬಾಗಲಕೋಟೆಯಲ್ಲಿ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನಕ್ಕೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮೌಲ್ಯಮಾಪನ ವಿಭಾಗದ ಸಹಾಯಕ ಕುಲಸಚಿವ ಡಾ. ರಮೇಶ್ ಜಿ.ಎಚ್. ಚಾಲನೆ ನೀಡಿದರು. ಡಾ. ಶ್ರೀಕಾಂತ ಕೊಂಕಣಿ, ಮಹೇಶ ಅಥಣಿ, ಅಶೋಕ ಸಜ್ಜನ ಇತರರಿದ್ದರು.
Published on: 

ಬಾಗಲಕೋಟೆ: ರಾಷ್ಟ್ರೀಯ ಸಮ್ಮೇಳನಗಳು ಸಂಶೋಧನೆಗೆ ಹೊಸ ಚೈತನ್ಯ ನೀಡುತ್ತವೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು ಸಮಾಜ ಸೇವೆಗೆ ಆದ್ಯತೆ ನೀಡಿ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಸಹಾಯಕ ಕುಲಸಚಿವ ಡಾ. ರಮೇಶ್ ಜಿ.ಎಚ್. ಹೇಳಿದರು.

ನಗರದ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ರಾಜೀವ ಗಾಂಧಿ ಆರೋಗ್ಯವಿವಿ ಆಶ್ರಯದಲ್ಲಿ ಶನಿವಾರ ನವನಗರದ ಎಸ್.ಎನ್. ಮೆಡಿಕಲ್ ಕಾಲೇಜಿನ ಶತಾಬ್ದಿ ಸಭಾ ಭವನದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಗ್ಲೋಬ್ ಇನ್ ಗ್ಲೋಬ್ಯೂಲ್ 2.0’ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು. ಹಣ ಸಂಪಾದನೆಗೆ ಒತ್ತು ನೀಡದೇ ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ವಿಶ್ವವಿದ್ಯಾಲಯವು ಇಂತಹ ಶೈಕ್ಷಣಿಕ ಹಾಗೂ ವೈಜ್ಞಾನಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ ಎಂದರು.

ಬೆಳಗಾವಿ ಭರತೇಶ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಶ್ರೀಕಾಂತ ಕೊಂಕಣಿ ಮಾತನಾಡಿ, ಹೋಮಿಯೋಪಥಿ ವೈದ್ಯರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಸಮ್ಮೇಳನದಿಂದ ಹೊಸ ವಿಚಾರಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆ ನಡೆಯಲಿ ಎಂದು ತಿಳಿಸಿದರು.

ಮುಂಬೈನ ಖ್ಯಾತ ಹೋಮಿಯೋಪಥಿ ತಜ್ಞ ಡಾ. ಶ್ರೀಪಾದ ಖೆಡೇಕರ ಮಾತನಾಡಿ, ಹೋಮಿಯೋಪಥಿ ಪದ್ಧತಿಗೆ ಸಂಬಂಧಿಸಿದ ವೈಜ್ಞಾನಿಕ ದಾಖಲೆಗಳ ಮಹತ್ವ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಅಗತ್ಯವನ್ನು ವಿವರಿಸಿದರು. ರೋಗಿಯ ವೈದ್ಯಕೀಯ ಮಾಹಿತಿ ಸಂಗ್ರಹದಿಂದ ಹಿಡಿದು ಚಿಕಿತ್ಸೆಯ ಲಿತಾಂಶದವರೆಗೆ ಸಮರ್ಪಕವಾಗಿ ದಾಖಲೀಕರಣ ಮಾಡುವುದು ಮುಖ್ಯ ಎಂದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿವಿವಿ ಸಂಘವು 1906ರಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ‘ಗ್ಲೋಬ್ ಇನ್ ಗ್ಲೋಬ್ಯೂಲ್’ ಪರಿಕಲ್ಪನೆಯು ಜಾಗತಿಕ ಜ್ಞಾನವನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಪದವಿ ಪಡೆಯುವುದರ ಜೊತೆಗೆ ಉತ್ತಮ ಸಂಶೋಧಕರಾಗಿ, ಮಾನವೀಯ ಮೌಲ್ಯಗಳನ್ನು ಹೊಂದಿದ ವೈದ್ಯರಾಗಿ ಹೊರಹೊಮ್ಮಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಪ್ರಸ್ತಾವಿಕ ಮಾತನಾಡಿದರು. ಹೋಮಿಯೋಪಥಿ ವೈದ್ಯಕೀಯ ಶಿಕ್ಷಣಕ್ಕೆ ಕೊಡುಗೆ ನೀಡಿದ ಕಲಬುರಗಿಯ ಡಾ. ಸತೀಶ ಕಲಶಟ್ಟಿ, ಡಾ. ಸಿದ್ದಣ್ಣ ಬೆಳಗುಂಪಿ, ಬೆಳಗಾವಿಯ ಡಾ. ಅರುಣ ಜಮದಾಡೆ, ಡಾ. ಕಿರಣ ಪಾಟೀಲ, ಧಾರವಾಡದ ಡಾ. ಸೋಹನ ಮಂಗುತ್ತಿ, ಬೆಂಗಳೂರಿನ ಡಾ. ಸಿರಾಜ್ ಡೋಲಾ ಹಾಗೂ ಡಾ. ಸುಜಾತಾ ಗೋಕಾಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ. ಅರುಣ ಹೂಲಿ. ಡಾ. ಮಯುರೇಶ ಮಹಾಜನ, ಡಾ. ಪ್ರದೀಪ್ ಕೆ.ಎಸ್. ಡಾ. ರವಿ ಕೋಟೆಣ್ಣವರ, ಡಾ. ರತ್ನಪ್ರಿಯಾ ಡಾ. ತಪ್ತಿ ಶಿಂದೆ, ಡಾ. ಾತಿಮಾ ಬಾಲಸಿಂಗ, ಡಾ. ಸುಧೀರ ಬೆಟಗೇರಿ, ಡಾ. ನುಸೃತ್ ಜಮಾದಾರ ಇತರರು ಇದ್ದರು.

ದೇಶದ ವಿವಿಧ ರಾಜ್ಯಗಳಿಂದ 1,000ಕ್ಕೂ ಹೆಚ್ಚು ಹೋಮಿಯೋಪಥಿ ವೈದ್ಯರು, ಸಂಶೋಧಕರು, ಪ್ರಾಧ್ಯಾಪಕರು ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ವಿವಿಧ ರಾಜ್ಯಗಳ ಕಾಲೇಜುಗಳಿಂದ ಆಗಮಿಸಿರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ಹಾಗೂ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net