ವಿವಾದಾತ್ಮಕ ಹೇಳಿಕೆಯ ರವಿ ಹಂಜ್‌ನನ್ನು ಬಂಧಿಸಿ

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ
ಬಾಗಲಕೋಟೆ: ವಿಶ್ವಗುರು, ಜಗಜ್ಯೋತಿ ಬಸವಣ್ಣನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಪುಸ್ತಕ  ಪ್ರಕಾಶಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬುದ್ಧ, ಬಸವ, ಅಂಬೇಡ್ಕರ್ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

 12ನೇ ಶತಮಾನದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಪ್ರತಿಪಾದಿಸಿದ ಬಸವಣ್ಣನವರು ಸರ್ವ ಜನರನ್ನು ಒಗ್ಗೂಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ದಾರ್ಶನಿಕರು. ಮೂಢ ನಂಬಿಕೆ, ಮೇಲು-ಕೀಳು ಮತ್ತು ಜಾತಿ ತಾರತಮ್ಯವನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಸಾರಿದ ಧೀಮಂತ. ಅನುಭವ ಮಂಟಪದ ಮೂಲಕ ಎಲ್ಲ ವರ್ಗದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿ ಪ್ರಜಾಸತ್ತಾತ್ಮಕ ಚಿಂತನೆಗೆ ಅಡಿಪಾಯ ಹಾಕಿದವರು. ಕನ್ನಡ ವಚನ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

 ಆದರೆ, ವಿಶ್ವವಾಣಿ ಟಿವಿ ಮಾಧ್ಯಮದ ಸಂದರ್ಶನವೊಂದರಲ್ಲಿ ರವಿ ಹಂಜ್, ಬಸವಣ್ಣನವರ ಕುರಿತು ಕಳ್ಳ, ಕೊಲೆಗಡುಕ, ಸುಳ್ಳುಗಾರ ಎಂಬಂತಹ ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಅಲ್ಲದೆ, ತಮ್ಮ ಲೇಖನಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಸವಾದಿ ಶರಣರು ಮತ್ತು ವಚನ ಸಾಹಿತ್ಯವನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯವನ್ನು ವ್ಯಂಗ್ಯವಾಗಿ ಸಂಬೋಧಿಸುವ ಮೂಲಕ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

 ಬಸವಣ್ಣನವರು ಬಿಜ್ಜಳನ ಖಜಾನೆ ದುರುಪಯೋಗ ಪಡಿಸಿಕೊಂಡಿದ್ದರು ಹಾಗೂ ಬಿಜ್ಜಳನ ಕೊಲೆ ಮಾಡಿಸಿದರು ಎಂದು ಹೇಳುವುದು ವ್ಯವಸ್ಥಿತವಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಧಾರ್ಮಿಕ ಐತಿಹಾಸಿಕ ಮೌಲ್ಯಗಳನ್ನು ಬುಡಮೇಲು ಮಾಡುವ ಸ್ಪಷ್ಟ ಕುತಂತ್ರವಾಗಿದೆ ಎಂದು ಕಿಡಿಕಾರಿದರು.

 ರವಿ ಹಂಜ್ ಅವರ ಈ ಹೇಳಿಕೆಗಳು 777 ಅಮರಗಣಗಳನ್ನು ನಂಬಿದ ಕಾಯಕ ವರ್ಗವನ್ನು ಅವಮಾನಿಸುವ ಗುಪ್ತ ಸಂಚಿನ ಭಾಗವಾಗಿ ಕಾಣುತ್ತಿದೆ. ಲಿಂಗಾಯತರ ವಿರುದ್ಧ ಇತ್ತೀಚೆಗೆ ನಡೆಯುತ್ತಿರುವ ಎಲ್ಲ ಬೆಳವಣಿಗೆಯ ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಸಂದರ್ಶನ ಪ್ರಸಾರ ಮಾಡಿದ ವಿಶ್ವವಾಣಿ ಪತ್ರಿಕೆ ಮತ್ತು ಅದರ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯ ಮೂಲಕ ಒತ್ತಾಯಿಸಿದರು.

 ಬುದ್ಧ, ಬಸವ, ಅಂಬೇಡ್ಕರ್ ವೇದಿಕೆ ಸಂಚಾಲಕ ಅರವಿಂದ ಮುಚಖಂಡಿ, ಅರವಿಂದ ನಾವಲಗಿ, ಲಿಂಗಾಯತ ಹಡಪದ ಸಮಾಜದ ಜಿಲ್ಲಾಧ್ಯಕ್ಷ ನಾಗಪ್ಪ ಹಡಪದ, ಭೋವಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಪರಶುರಾಮ ಪಾತ್ರೋಟ, ಪಂಚಮಸಾಲಿ ಸಮಾಜದ ಗುರುಬಸವ ಸಿಂಧೂರ, .ಗು. ಹಳಕಟ್ಟಿ ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ತಿಪಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಮಹಿಳಾ ಸದಸ್ಯರಾದ ಜ್ಯೋತಿ ಕುಮಟಗಿ, ಶಿವಲೀಲಾ ಪಟ್ಟಣಶೆಟ್ಟಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

 ಪ್ರತಿಭಟನೆಯಲ್ಲಿ ವಿವಿಧ ಕಾಯಕ ಸಮಾಜಗಳ ಮುಖಂಡರಾದ ಹನಮಂತ ಹೊಲ್ದುರ, ಮಲ್ಲಿಕಾರ್ಜುನ ಸುಳಿಕೇರಿ, ಈರಣ್ಣ ಬಣಗಾರ, ವೀರಭದ್ರಪ್ಪ ಅಂಗಡಿ, ಪ್ರಭು ವೈಜಾಪುರ, ಮಲ್ಲಿಕಾರ್ಜುನ ಹೊಸಮನಿ, ವಿನಯಕುಮಾರ ನಾವಲಗಿ, ರಶ್ಮಿ ಲಮಾಣಿ, ಚನ್ನಮ್ಮ ವಡ್ಡರ, ಭೀಮಪ್ಪ ಪೂಜಾರ, ಜೆ.ಕೆ. ನಾಶಿ, ಗೌರಮ್ಮ ಪೂಜಾರಿ ಇತರರಿದ್ದರು.
ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿರುವ ರವಿ ಹಂಜ್ ಅವರನ್ನು ಬಂಧಿಸಬೇಕು ಹಾಗೂ ಬಸವ ಮಂಟಪ ಪುಸ್ತಕ ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ಬಾಗಲಕೋಟೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ವೇದಿಕೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Published on: 