ಯುವ ಪೀಳಿಗೆಗೆ ಜಾನಪದ ಕಲೆ ಪರಿಚಯಿಸಿ

ಸೋಮನಾಥ ಗೊಂಬಿ ಹೇಳಿಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬೀಳಗಿ ಅವರ ಜುಗಲ್‌ಬಂದಿ ಕಾರ್ಯಕ್ರಮ
ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮಕ್ಕೆ ಸಿಪಿಐ ರಾಜು ಪಾಟೀಲ ಚಾಲನೆ ನೀಡಿದರು. ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬೀಳಗಿ, ಗುರುಪ್ರಸಾದ ಸ್ವಾಮೀಜಿ, ಶ್ರೀಶೈಲ ದಭಾಡಿ. ದಾನಪ್ಪ ಹುಲಜತ್ತಿ, ಶಂಕರ ಸೊರಗಾಂವಿ ಇತರರಿದ್ದರು.
ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮಕ್ಕೆ ಸಿಪಿಐ ರಾಜು ಪಾಟೀಲ ಚಾಲನೆ ನೀಡಿದರು. ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬೀಳಗಿ, ಗುರುಪ್ರಸಾದ ಸ್ವಾಮೀಜಿ, ಶ್ರೀಶೈಲ ದಭಾಡಿ. ದಾನಪ್ಪ ಹುಲಜತ್ತಿ, ಶಂಕರ ಸೊರಗಾಂವಿ ಇತರರಿದ್ದರು.
Published on: 

ರಬಕವಿ-ಬನಹಟ್ಟಿ: ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಸಂಪತ್ತು. ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆ. ಯುವಪೀಳಿಗೆಗೆ ಜಾನಪದ ಕಲೆಯನ್ನು ಪರಿಚಯಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಜೇಡರ ದಾಸಿಮಯ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮನಾಥ ಗೊಂಬಿ ಹೇಳಿದರು.

ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ನಡೆದ ಜಾನಪದ ಸಂಭ್ರಮದಲ್ಲಿ ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬೀಳಗಿ ಅವರ ಜುಗಲ್‌ಬಂದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ಲೋಬಲ್ ಎಜ್ಯುಕೇಶನ್ ಸಂಸ್ಥಾಪಕ ಶಿವಾನಂದ ಬೆಳ್ಳಿವರಿ ಮಾತನಾಡಿ, ಜನರ ಬದುಕಿನ ಅನುಭವಗಳಿಂದಲೇ ಜಾನಪದ ಸೃಷ್ಟಿಯಾಗುತ್ತದೆ. ಮನುಷ್ಯನ ಜೀವಚೈತನ್ಯ ಹೆಚ್ಚಿಸುವುದರೊಂದಿಗೆ ಗ್ರಾಮೀಣ ಸೊಗಡನ್ನು ಉಳಿಸುವಲ್ಲಿ ಜಾನಪದದ ಪಾತ್ರ ಮಹತ್ವದ್ದಾಗಿದೆ ಎಂದರು.

ಬೀಳಗಿಯ ಆಶುಕವಿ ಸಿದ್ದಪ್ಪ ಬೀಳಗಿ ಅವರು ಯುವಪೀಳಿಗೆಯ ನಡೆ-ನುಡಿ, ರಾಜಕೀಯ ವ್ಯವಸ್ಥೆ, ಕೌಟುಂಬಿಕ ಸಮಸ್ಯೆಗಳು ಹಾಗೂ ಸಾಮಾಜಿಕ ಜ್ವಲಂತ ವಿಚಾರಗಳನ್ನು ತಮ್ಮ ವಿಶಿಷ್ಠ ಹಾಸ್ಯಮಿಶ್ರಿತ ಆಶುಕವಿತೆಗಳ ಮೂಲಕ ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಜೀವನಾನುಭವವನ್ನೇ ಕಾವ್ಯವಾಗಿಸಿಕೊಂಡ ಅವರ ಪ್ರತಿಭೆಗೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುರಾಜ ಹೊಸಕೋಟಿ ಅವರ ಗಾಯನ ಮತ್ತು ಸಿದ್ದಪ್ಪ ಬೀಳಗಿ ಅವರ ಆಶುಕವಿತೆಯ ಸಮ್ಮಿಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಗುರು ಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿಪಿಐ ರಾಜು ಪಾಟೀಲ, ಶ್ರೀಶೈಲ ದಭಾಡಿ, ದಾನಪ್ಪ ಹುಲಜತ್ತಿ, ಶಂಕರ ಸೊರಗಾಂವಿ, ಪ್ರಶಾಂತ ಕೊಳಕಿ, ಮಲ್ಲಿಕಾರ್ಜುನ ತುಂಗಳ, ಸುರೇಶ ಬೀಳಗಿ, ಶಂಕರ ಜಾಲಿಗಿಡದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net