ಬನಹಟ್ಟಿ ಕಾಡಸಿದ್ಧೇಶ್ವರ ರಥೋತ್ಸವ ಅದ್ದೂರಿ ಸಂಭ್ರಮ

ನಗರದಲ್ಲಿ ಹಬ್ಬದ ವಾತಾವರಣ * ಪಟಾಕಿ ಸಿಡಿಸಿ ಆಚರಣೆ
ರಬಕವಿ-ಬನಹಟ್ಟಿ: ಬನಹಟ್ಟಿ ನಗರದ ಆರಾಧ್ಯ ದೇವ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿ ಹಾಗೂ ವಿಜೃಂಭಣೆಯಿಂದ ಜರುಗಿತು.

 ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗಿನ ಜಾವ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಬುತ್ತಿ ಪೂಜೆ ಹಾಗೂ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿದವು. ಬಳಿಕ ದೇವಸ್ಥಾನದಲ್ಲಿ ಸಕಲ ವಾದ್ಯಮೇಳಗಳೊಂದಿಗೆ ರಥೋತ್ಸವದ ಪೂಜಾ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ಜರುಗಿದವು.

 ಸಂಜೆಯ ವೇಳೆಗೆ ದೇವಸ್ಥಾನದ ಸುತ್ತಮುತ್ತ ಹಾಗೂ ರಥ ಸಾಗುವ ಮಾರ್ಗದಲ್ಲಿ ಭಕ್ತರ ಸಂಭ್ರಮ ಕಳೆಗಟ್ಟಿತ್ತು. ರಾತ್ರಿ 8 ಗಂಟೆಗೆ ವಿಶೇಷ ಪೂಜಾ ವಿಧಿವಿಧಾನಗಳ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥದ ಹಗ್ಗವನ್ನು ಎಳೆದು ಕಾಡಸಿದ್ದೇಶ್ವರನಿಗೆ ಭಕ್ತಿ ಸಮರ್ಪಿಸಿದರು.

 ಇದಕ್ಕೂ ಪೂರ್ವದಲ್ಲಿ ಅಪಾರ ಪ್ರಮಾಣದ ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ವಿವಿಧ ವಾದ್ಯಮೇಳಗಳು ಮೊಳಗಿದವು. ಭಕ್ತರು ಜಯಘೋಷಗಳನ್ನು ಕೂಗುತ್ತಾ, ಹೂವು ಹಾಗೂ ಕಾಯಿ-ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

 ಸುತ್ತಮುತ್ತಲಿನ ಗ್ರಾಮಗಳು ಸೇರಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಹಾಗೂ ರಥೋತ್ಸವದ ಮಾರ್ಗದಲ್ಲಿ ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಕಾಡಸಿದ್ಧೇಶ್ವರನ ರಥೋತ್ಸವ ಭಕ್ತಿಭಾವ ಮತ್ತು ಸಂಭ್ರಮದಿಂದ ಸಂಪನ್ನಗೊಂಡಿತು.
ರಬಕವಿ-ಬನಹಟ್ಟಿಯ ಕಾಡಸಿದ್ಧೇಶ್ವರ ರೋಥೋತ್ಸವ ಅದ್ದೂರಿಯಾಗಿ ಜರುಗಿತು.
Published on: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net