ದಾರ್ಶನಿಕರನ್ನು ಟೀಕಿಸುವ ಹೊಸ ರೋಗ

ಲೇಖಕ ರವಿ ಹಂಜ್‌ ವಿರುದ್ಧ ಎಸ್.ಜಿ. ನಂಜಯ್ಯನಮಠ ಆಕ್ರೋಶ
ಬಾಗಲಕೋಟೆ: ಇತ್ತೀಚಿನ ವರ್ಷಗಳಲ್ಲಿ ದಾರ್ಶನಿಕರು, ದೊಡ್ಡ ದೊಡ್ಡ ವ್ಯಕ್ತಿಗಳನ್ನು ಟೀಕಿಸುವ ಹೊಸ ರೋಗ ಶುರುವಾಗಿದೆ. ಇದು ಬುದ್ಧಿವಂತರಿಗೆ ಅಂಟಿರುವ ರೋಗವಾಗಿದೆ. ಕಾರಣ ಇಂತವರಿಗೆ ನಮ್ಮಲ್ಲಿ ಶಿಕ್ಷೆಯ ಪ್ರಮಾಣ ಇಲ್ಲ, ದೂರು ಕೊಟ್ಟಕೂಡಲೇ ಜಾಮೀನು ಪಡೆದು ಹೊರಗೆ ತಿರುಗುತ್ತಾರೆ. ಹೀಗಾಗಿ ರವಿ ಹಂಜ್‌ನಂತವರಿಗೆ ಸಾರ್ವಜನಿಕರು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬಸವಣ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ವರ್ತನೆ ಬಗ್ಗೆ ತೀವ್ರವಾಗಿ ಖಂಡಿಸಿರುವ ಅವರು, ನಾಡಿಗೆ ಬಹಳಷ್ಟು ಸೇವೆ ಸಲ್ಲಿಸಿರುವ ದೇಶದ ದೊಡ್ಡವರನ್ನು ಟೀಕಿಸುವ ಹೊಸ ಸ್ಟೈಲ್ ಶುರುವಾಗಿದೆ ಎಂದರು.

 ಬಸವಣ್ಣನವರು ಜಗತ್ತಿಗೆ ವಚನಗಳ ಮೂಲಕ ದಾರ್ಶನಿಕತೆಯನ್ನು ಕೊಟ್ಟವರು. ರಾಷ್ಟ್ರಕವಿ ಕುವೆಂಪು ಅಂತವರು ಬಸವಣ್ಣನವರ ನಿಷ್ಠೆ, ಕಾಯಕ, ವಚನಗಳಲ್ಲಿನ ಸಾರದ ಬಗ್ಗೆ ಬರೆದಿದ್ದಾರೆ. ಡಾ. ಅಂಬೇಡ್ಕರ್ ಅವರು ಸಂವಿದಾನ ರಚನೆ ಮಾಡುವ ಸಂದರ್ಭದಲ್ಲಿ ವಚನಗಳು ಸಿಕ್ಕಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂವಿಧಾನ ರಚನೆ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ.  ಸಮಾನತೆಯ ಸಾರವನ್ನು ವಿಸ್ತಾರವಾಗಿ ಹೇಳಿರುವುದು ವಚನಗಳ ತತ್ವಗಳಲ್ಲಿ ಇದೆ ಎಂದು  ದೊಡ್ಡವರೇ ಹೇಳುತ್ತಾರೆ. ಆದರೆ, ರವಿ ಹಂಜ್ ಎನ್ನುವವ ಯಾವ ಹುಂಜ್? ಯಾವ ಕೋಳಿನೊ? ಅವರು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

 ಗಾಂಧೀಜಿ, ನೆಹರು, ಬಸವಣ್ಣನವರು, ಬುದ್ಧ, ಕೃಷ್ಣ, ಪೈಗಂಬರ ಅವರೆಲ್ಲರ ಬಗ್ಗೆ ಸಣ್ಣ ಮಾತು ಆಡುವುದು. ರಾಷ್ಟ್ರ ನಾಯಕರನ್ನು ಅವಹೇಳನ ಮಾಡುವಂಥದ್ದು , ಇಂತಹ ದಾರ್ಶನಿಕರ ಬಗ್ಗೆ ಟೀಕೆ ಮಾಡುವ ಇವನ ನಾಲಿಗೆ ಯಾವ ಉತ್ಕೃಷ್ಠತೆಯನ್ನು  ಪಡೆದಿದೆ? ಅವನ ನಾಲಿಗೆ ಎಲ್ಲಿಗೆ ಹೋಲಿಕೆ ಮಾಡಬೇಕು. ಅವನ ನಾಲಿಗೆ ಚಪ್ಪಲಿಗಿಂತ ಕಡಿಮೆ ದರ್ಜೆಯ ನಾಲಿಗೆ ಅದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಎಸ್.ಜಿ. ನಂಜಯ್ಯನಮಠ
Published on: 