ಡಾ.ಎಂ.ಎಂ. ಕಲಬುರ್ಗಿ ಆದರ್ಶ ಅಳವಡಿಸಿಕೊಳ್ಳಿ

ಡಾ. ವೀರಣ್ಣ ರಾಜೂರ ಹೇಳಿಕೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ಗುಳೇದಗುಡ್ಡದ ಎಸ್.ಎಂ. ಭಂಡಾರಿ ಕಲಾ, ಆರ್.ಆರ್. ಭಂಡಾರಿ ವಾಣಿಜ್ಯ ಹಾಗೂ ಎಸ್.ಕೆ. ರಾಠಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಕರ್ನಾಟಕ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು. ಡಾ. ವೀರಣ್ಣ ರಾಜೂರ, ಹಿರಿಯ ಸಂಶೋಧಕ ಪ್ರೊ. ಬಿ.ವಿ. ಶಿರೂರ, ಪ್ರಾಚಾರ್ಯ ಪ್ರೊ. ಎನ್.ವೈ. ಬಡನ್ನವರ, ಪ್ರೊ. ಸಣ್ಣವೀರಣ್ಣ ದೊಡ್ಡಮನಿ, ಸಾಹಿತಿ ಹನುಮಾಕ್ಷಿ ಗೋಗಿ, ಮಾಜಿ ಶಾಸಕ ರಾಜಶೇಖರ ಶೀಲವಂತ ಇತರರಿದ್ದರು.

Published on: 

ಗುಳೇದಗುಡ್ಡ: ಡಾ. ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ದಷ್ಟಿಕೋನ, ಅಧ್ಯಯನಶೀಲತೆ ಮತ್ತು ಸಮಾಜಮುಖಿ ಚಿಂತನೆಗಳು ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಮಾರ್ಗದರ್ಶಿಯಾಗಬೇಕು. ಅವರ ವಿಚಾರಗಳನ್ನು ಅರಿತು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.

ಪಟ್ಟಣದ ಎಸ್.ಎಂ. ಭಂಡಾರಿ ಕಲಾ, ಆರ್.ಆರ್. ಭಂಡಾರಿ ವಾಣಿಜ್ಯ ಹಾಗೂ ಎಸ್.ಕೆ. ರಾಠಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಕರ್ನಾಟಕ ಸಂಘಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕಲಬುರ್ಗಿ ಅವರು ಅಧ್ಯಾಪನದ ಜತೆಗೆ ನಿರಂತರ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಿದ್ದರು. ಹಳಗನ್ನಡದ ಅಧ್ಯಯನ, ಸಂಶೋಧನೆ ಹಾಗೂ ಜ್ಞಾನವನ್ನು ಸಮಾಜಮುಖಿಯಾಗಿ ಬಳಸುವ ಅವರ ಚಿಂತನೆಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು. ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಮಠಗಳ ಮೂಲಕ ಪುಸ್ತಕ ಪ್ರಕಟಣೆ ಸೇರಿದಂತೆ ಜ್ಞಾನಾಧಾರಿತ ಯೋಜನೆಗಳನ್ನು ಮುಂದುವರಿಸುವ ಅಗತ್ಯವಿದೆ ಎಂದರು.

ಹಿರಿಯ ಸಂಶೋಧಕ ಪ್ರೊ. ಬಿ.ವಿ. ಶಿರೂರ ಮಾತನಾಡಿ, ಕಲಬುರ್ಗಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಅಧ್ಯಯನ ತಮ್ಮಂತಹ ಸಂಶೋಧಕರಿಗೆ ಸದಾ ಪ್ರೇರಣೆಯಾಗಿದೆ ಎಂದರು.

ಪ್ರಾಚಾರ್ಯ ಪ್ರೊ. ಎನ್.ವೈ. ಬಡನ್ನವರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಸಣ್ಣವೀರಣ್ಣ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿತಿ ಹನುಮಾಕ್ಷಿ ಗೋಗಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಪಿಇಟಿ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಪ್ರೊ. ಎಸ್. ನಾಯನೇಗಲಿ, ಸಿದ್ರಾಮಯ್ಯ ಪುರಾಣಿಕಮಠ, ಭದ್ರಿನಾಥ ಹಣಗಿ, ಶ್ಯಾಮಸುಂದರ ಮಾಲಪಾಣಿ, ಪ್ರೊ. ಎಸ್.ಎಂ. ಪಾಟೀಲ ಹಾಗೂ ಪ್ರೊ. ಎಸ್.ಬಿ. ಬರಗುಂಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net