ಚಾಲುಕ್ಯರ ಕಾಲದಿಂದಲೂ ಬೌದ್ಧ ಪರಂಪರೆ ಕುರುಹು

ವಿಧಾನ ಪರಿಷತ್ ಸದಸ್ಯ ಎಫ್​.ಎಚ್. ಜಕ್ಕಪ್ಪನವರ ಅಭಿಮತ
ಬಾಗಲಕೋಟೆ : ಚಾಲುಕ್ಯರ ಕಾಲದಿಂದಲೂ ಬೌದ್ಧ ಪರಂಪರೆಯ ಕುರುಹುಗಳು ಉಳಿದುಕೊಂಡು ಬಂದಿವೆ ಎಂದು ವಿಧಾನ ಪರಿಷತ್ ಸದಸ್ಯ ಎ್.ಎಚ್. ಜಕ್ಕಪ್ಪನವರ ಹೇಳಿದರು.

 ನವನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜರುಗಿದ ಧಮ್ಮಚಕ್ರ ಪರಿವರ್ತನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಲುಕ್ಯರ ಇತಿಹಾಸ ಮತ್ತು ಅಸ್ಮಿತೆಯ ಪುನರುತ್ಥಾನದ ಪ್ರಯತ್ನ ಮಾಡಿದಾಗ ಬೌದ್ಧ ಪರಂಪರೆಯ ಮಹತ್ವವೂ ಬೆಳಕಿಗೆ ಬರುತ್ತದೆ ಎಂದರು.

 ಬೌದ್ಧ ಧರ್ಮ ನಮ್ಮ ಉಸಿರಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಂದಾಗಿ ನಮಗೆ ಬೌದ್ಧ ಧಮ್ಮದ ಮಾರ್ಗ ದೊರೆತಿದೆ. ಬೌದ್ಧ ವಿಹಾರಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಅವು ಕೇವಲ ಕೆಲವರ ಕಾರ್ಯಕ್ರಮಗಳಾಗದೆ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಧಮ್ಮದ ಚಟುವಟಿಕೆಗಳಾಗಬೇಕು ಎಂದು ತಿಳಿಸಿದರು.

 ನಮ್ಮ ಸಂಸ್ಕೃತಿಯ ಮೂಲ ಆಶಯಗಳು ಏನೆಂಬುದನ್ನು ತಿಳಿಯದೆ ಅನೇಕ ಆಚರಣೆಗಳನ್ನು ನಮಗೆ ಅರಿವಿಲ್ಲದಂತೆಯೇ ಅನುಸರಿಸುತ್ತಿದ್ದೇವೆ. ನಮ್ಮ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

 ಉಪನ್ಯಾಸ ನೀಡಿದ ತುಮಕೂರಿನ ನಟರಾಜ್ ಬುದಾಳ ಮಾತನಾಡಿ, ಬೌದ್ಧ ಧಮ್ಮವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾದುದಲ್ಲ. ಅದು ಜ್ಞಾನ, ಪ್ರಜ್ಞೆ, ವೈಚಾರಿಕತೆ, ಸಮಾನತೆ ಮತ್ತು ಮಾನವೀಯತೆಯ ಬದುಕಿನ ಮಾರ್ಗವಾಗಿದೆ ಎಂದರು.

 ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬುದ್ದ ಧಮ್ಮಗಳ ಒಕ್ಕೂಟ ಸಮಿತಿಯ ಗೌರವಾಧ್ಯಕ್ಷ  ಬಿ. ಗೋಪಾಲ ಮಾತನಾಡಿದರು. ಪ್ರೇಮನಾಥ ಗರಸಂಗಿ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಚಲವಾದಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿದಾನಂದ ಕಾಂಬಳೆ, ಕರ್ನಾಟಕ ರಾಜ್ಯ ಸಮಗಾರ-ಚಮ್ಮಾರ ಹರಳಯ್ಯ ಸಂಘದ ಗೌರವಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ, ಬಾಗಲಕೋಟೆ ಜಿಲ್ಲಾ ಚೆನ್ನದಾಸರ ಕ್ಷೇಮಾಭಿವದ್ಧಿ ಸಂಘದ ಅಧ್ಯಕ್ಷ ಎಸ್.ಕೆ. ದಾಸರ, ಕರ್ನಾಟಕ ರಾಜ್ಯ ಶ್ರೀ ಶಿವಶರಣ ಡೋಹರ ಕಕ್ಕಯ್ಯ ಸಮಾಜದ ಉಪಾಧ್ಯಕ್ಷ ಮನೋಹರ ಕದಂ,  ಬಾಗಲಕೋಟೆ ನಗರಸಭೆಯ ಮಾಜಿ ಸಭಾಪತಿ ಯಲ್ಲಪ್ಪ ನಾರಾಯಣಿ ಉಪಸ್ಥಿತರಿದ್ದರು.
ಬಾಗಲಕೋಟೆ ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಧಮ್ಮಚಕ್ರ ದಿನಾಚರಣೆಯಲ್ಲಿ ಪರಿಷತ್ ಸದಸ್ಯ ಎಫ್​.ಎಚ್. ಜಕ್ಕಪ್ಪನವರ ಅವರನ್ನು ಸನ್ಮಾನಿಸಲಾಯಿತು. ಪ್ರೇಮನಾಥ ಗರಸಂಗಿ, ಚಿದಾನಂದ ಕಾಂಬಳೆ ಇತರರಿದ್ದರು.
Published on: 