ಬಾಗಲಕೋಟೆ ವಿದ್ಯಾಗಿರಿಯ ಶ್ರೀ ಕಾಳಿಕಾಂಬಾದೇವಿ 20ನೇ ಪ್ರತಿಷ್ಠಾವರ್ಧಂತಿ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರೇ ಸೇರಿಕೊಂಡು ರಥೋತ್ಸವ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಥ ಎಳೆದ ಮಹಿಳೆಯರು
ನವಗ್ರಹ ಹೋಮ, ಭಕ್ತರಿಗೆ ಪ್ರಸಾದ
ಬಾಗಲಕೋಟೆ:
ವಿದ್ಯಾಗಿರಿಯ ಶ್ರೀ ಕಾಳಿಕಾಂಬಾದೇವಿ ದೇವಸ್ಥಾನದ 20ನೇ ಪ್ರತಿಷ್ಠಾವರ್ಧಂತಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಮಹಿಳೆಯರೇ ರಥವನ್ನು ಎಳೆಯುವ ಮೂಲಕ ಅದ್ದೂರಿ ರಥೋತ್ಸವ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ವಾಸ್ತು, ರಾಕ್ಷೋಘ್ನ ಹಾಗೂ ನವಗ್ರಹ ಹೋಮಗಳು ಜರುಗಿದವು. ಬೆಳಗ್ಗೆ ನವಕಲಾ ಹೋಮ, ಕ್ಷೇತ್ರಾಽದೇವತೆ ಹಾಗೂ ಪರಿವಾರ ದೇವತೆಗಳಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ರಾಜೋಪಚಾರ, ಪ್ರಸನ್ನ ಮಹಾಪೂಜೆ ಹಾಗೂ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು.
ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಕಟಪಾಡಿಯ ಬ್ರಹ್ಮಶ್ರೀಧರ ಶರ್ಮಾ ಹಾಗೂ ಬಾಳಕೃಷ್ಣ ಕಡ್ಲಾಸ್ಕರ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಅರಣೆ
ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಮಹಿಳೆಯರಿಂದ ರಥೋತ್ಸವ
ಸಂಜೆ ಸಕಲ ಮಂಗಳವಾದ್ಯ ಹಾಗೂ ವೇದ ಘೋಷಗಳ ನಡುವೆ ವಿಶೇಷವಾಗಿ ಅಲಂಕರಿಸಲಾಗಿದ್ದ ಶ್ರೀ ಕಾಳಿಕಾಂಬಾದೇವಿಯ ರಥೋತ್ಸವ ವಿಜೃಂಭಣೆಯಿAದ ನಡೆಯಿತು. ಮಹಿಳೆಯರೇ ರಥವನ್ನು ಎಳೆಯುವ ಮೂಲಕ ಗಮನ ಸೆಳೆದರು. ರಥೋತ್ಸವದ ವೇಳೆ ಭಕ್ತರು ಭಕ್ತಿ-ಭಾವದಿಂದ ಪಾಲ್ಗೊಂಡರು.
ದೇವಿಯ ದರ್ಶನ ಪಡೆದ ಗಣ್ಯರು
ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಆಶೀರ್ವಾದ ಪಡೆದರು.
ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ
ಬ್ರಹ್ಮಾಂಡಬೇರಿ ಮಠದ ಡಾ. ಸುಧೀಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. 50ನೇ ವರ್ಷದ ವಿವಾಹ ಜೀವನ ಪೂರೈಸಿದ ದಂಪತಿಯನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತರಾವ ಕಮ್ಮಾರ, ಈರಣ್ಣ ಪತ್ತಾರ, ಗುರುರಾಜ ಅಗಳತಕಟ್ಟಿ, ಎಚ್.ಟಿ. ಪತ್ತಾರ, ಆರ್.ಜಿ. ಪತ್ತಾರ, ಗಂಗಾಧರ ಬಡಿಗೇರ, ದೇವಿಪ್ರಸಾದ ಮಾಯಾಚಾರಿ, ರಾಚಪ್ಪ ಬಡಿಗೇರ, ಯಂಕಪ್ಪ ಬಡಿಗೇರ, ಬಸವರಾಜ ಬಡಿಗೇರ, ಛಾಯಾ ಪತ್ತಾರ, ಭಾರತಿ ಪತ್ತಾರ, ವಿಮಲಾ ಅಗಳತಕಟ್ಟಿ, ರಾಜೇಶ್ವರಿ ಸೋನಾರ, ಲಲಿತಶ್ರೀ ಕಮ್ಮಾರ, ಸೌಮ್ಯ ಪತ್ತಾರ, ಲಕ್ಷ್ಮೀಬಾಯಿ ಪತ್ತಾರ ಅನೇಕರು ಉಪಸ್ಥಿತರಿದ್ದರು.