ಸಾರ್ವಜನಿಕರು ಕಾನೂನು ಪಾಲಿಸಲಿ

ತೇರದಾಳ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ಐಜಿಪಿ ಸಂದೀಪ ಪಾಟೀಲ. ಡಿವೈಎಸ್‌ಪಿ ಎಸ್.ರೋಷನ್ ಜಮೀರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐ ಶಿವಾನಂದ ಸಿಂಗನ್ನವರ ಸೇರಿ ವಿವಿಧ ಠಾಣೆ ಅಧಿಕಾರಿಗಳು ಇದ್ದರು.
ತೇರದಾಳ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ಐಜಿಪಿ ಸಂದೀಪ ಪಾಟೀಲ. ಡಿವೈಎಸ್‌ಪಿ ಎಸ್.ರೋಷನ್ ಜಮೀರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐ ಶಿವಾನಂದ ಸಿಂಗನ್ನವರ ಸೇರಿ ವಿವಿಧ ಠಾಣೆ ಅಧಿಕಾರಿಗಳು ಇದ್ದರು.ತೇರದಾಳ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ಐಜಿಪಿ ಸಂದೀಪ ಪಾಟೀಲ. ಡಿವೈಎಸ್‌ಪಿ ಎಸ್.ರೋಷನ್ ಜಮೀರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐ ಶಿವಾನಂದ ಸಿಂಗನ್ನವರ ಸೇರಿ ವಿವಿಧ ಠಾಣೆ ಅಧಿಕಾರಿಗಳು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ತೇರದಾಳ

ದೇಶದಲ್ಲಿ ಕಾನೂನನ್ನು ಸುಮ್ಮನೆ ರಚಿಸಿಲ್ಲ. ಅದಕ್ಕೊಂದು ತನ್ನದೆಯಾದ ಬೆಲೆ ಇದೆ. ಕಾನೂನು ಇರುವುದು ಜನ ಸಾಮಾನ್ಯರ ಒಳಿತಿಗಾಗಿ ಎಂಬುದನ್ನು ಪ್ರತಿಯೊಬ್ಬರು ಅರಿತು ಅದನ್ನು ಗೌರವಿಸಬೇಕೆಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಪ್ರಥಮ ಬಾರಿಗೆ ಭೇಟಿ ನೀಡಿ ಅವರು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಯುವಕರಲ್ಲಿ ಕಾನೂನಿನ ಬಗ್ಗೆ ಗೌರವ ಕಾಣುತ್ತಿಲ್ಲ. ವಿದ್ಯಾವಂತರು ಕೂಡ ಕಾನೂನು ಪಾಲಿಸದೆ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು, ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವುದು ಸಮಾಜದಲ್ಲಿ ಇದು ಕೆಟ್ಟ ಬೆಳವಣಿಗೆ. ಆದ್ದರಿಂದ ಈ ಬಗ್ಗೆ ಯುವ ಸಮುದಾಯ ಜಾಗೃತರಾಗಬೇಕಿದೆ ಎಂದರು.

ಠಾಣೆಯಲ್ಲಿ ಪರಿಶೀಲನೆ ನಡೆಸಿ ಠಾಣಾಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿ, ಶಿಸ್ತು, ಸ್ವಚ್ಛತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಠಾಣೆ ಆವರಣದಲ್ಲಿ ಸಸಿ ಹಚ್ಚುವ ಮೂಲಕ ಪರಿಸರ ಸಂರಕ್ಷಣೆಗೆ ಠಾಣೆ ಸಿಬ್ಬಂದಿಗೆ ಕರೆ

ನೀಡಿದರು. ಠಾಣೆ ಆವರಣದಲ್ಲಿರುವ ಪೊಲೀಸ್ ವಸತಿ ಗೃಹ ವೀಕ್ಷಣೆ ವೇಳೆ ಪೊಲೀಸ್ ಕುಟುಂಬಸ್ಥರು ವಸತಿ ಗೃಹಗಳಿಗೆ ನೀರಿನ ಸಮಸ್ಯೆ, ಕಟ್ಟಡ ಸೋರುವುದು ಸೇರಿ ಹಲವು ಸಮಸ್ಯೆಗಳನ್ನು

ಹೇಳಿಕೊಂಡರು.

ಜಮಖಂಡಿ ಡಿಎಸ್ಪಿ ಎಸ್. ರೋಷನ್ ಜಮೀರ, ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ, ಠಾಣಾಧಿಕಾರಿ ಎಸ್.ಕೆ. ಸಿಂಗನ್ನವರ ಸೇರಿ ವಿವಿಧ ಠಾಣೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net