ಸಾರ್ವಜನಿಕ ಸ್ಥಳದಲ್ಲಿ ಸಿರಿಂಜ್, ಔಷಧಿ ಬಾಟಲಿ ಪತ್ತೆ

ತೇರದಾಳ ಪಟ್ಟಣದ ಯಲ್ಲಮ್ಮದೇವಿ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವ ಬಳಸಿದ ಸಿರಿಂಜ್‌ಗಳು ಹಾಗೂ ಔಷಧಿ ಬಾಟಲಿಗಳು.
ತೇರದಾಳ ಪಟ್ಟಣದ ಯಲ್ಲಮ್ಮದೇವಿ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವ ಬಳಸಿದ ಸಿರಿಂಜ್‌ಗಳು ಹಾಗೂ ಔಷಧಿ ಬಾಟಲಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ತ್ಯಾಜ್ಯದಿಂದ ಜನರಲ್ಲಿ ಆತಂಕ
  • ತನಿಖೆಗೆ ಒತ್ತಾಯ
  • ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆಯವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ತೇರದಾಳ :

ಪಟ್ಟಣದ ಯಲ್ಲಮ್ಮದೇವಿ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಬಳಸಿದ ಸಿರಿಂಜ್‌ಗಳು ಹಾಗೂ ಔಷಧಿ ಬಾಟಲಿಗಳನ್ನು ಯಾರೋ ಎಸೆದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಜನರು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿ ವೈದ್ಯಕೀಯ ತ್ಯಾಜ್ಯ ಬಿದ್ದಿರುವುದು ಸಾರ್ವಜನಿಕ ಆರೋಗ್ಯದ ದಷ್ಟಿಯಿಂದ ಅಪಾಯಕಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆಯು ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಘನತ್ಯಾಜ್ಯ ಘಟಕದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದು, ಬಳಸಿದ ಸಿರಿಂಜ್‌ಗಳು ಹಾಗೂ ಇತರೆ ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸಲು ವಿಶೇಷ ವಾಹನದ ವ್ಯವಸ್ಥೆಯೂ ಇದೆ. ಇಂತಹ ವ್ಯವಸ್ಥೆ ಇದ್ದರೂ ನಿಯಮ ಉಲ್ಲಂಸಿ ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಎಸೆಯುತ್ತಿರುವುದು ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆಯವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ಕುರಿತು ತಾಲೂಕು ವೈದ್ಯಾಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಾರ್ವಜನಿಕರ ಪರವಾಗಿ ಗಲ್ಲಿಯಲ್ಲಿನ ಉದ್ಯೋಗಿ ನೇಮಿನಾಥ ಬಿಲವಡಿ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net