ಸಮಗ್ರ ವೈದ್ಯಕೀಯ ಸಂಕೀರ್ಣ ಅಭಿವೃದ್ಧಿಗೆ ಬದ್ಧ

ಜಮಖಂಡಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತುರ್ತು ಚಿಕಿತ್ಸೆಗೆ ೬ ಹಾಸಿಗೆಯ ನ್ಯೂಬಾರ್ನ್ ಸ್ಟೆಬಿಲೈಸೇಶನ್ ಕೇಂದ್ರವನ್ನು ಉದ್ಘಾಟಿಸಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾಹಿತಿ ಪಡೆದುಕೊಂಡರು. ಶಿಶು ತಜ್ಞ ಡಾ. ರಾಕೇಶ ಬಗಲಿ, ಡಾ. ಜಿ.ಎಸ್. ಗಲಗಲಿ, ಡಾ. ಕೃಷ್ಣಾ ಬಣ್ಣದ, ಡಾ. ದಯಾನಂದ ಕರೆಣ್ಣವರ ಇತರರಿದ್ದರು.
ಜಮಖಂಡಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತುರ್ತು ಚಿಕಿತ್ಸೆಗೆ ೬ ಹಾಸಿಗೆಯ ನ್ಯೂಬಾರ್ನ್ ಸ್ಟೆಬಿಲೈಸೇಶನ್ ಕೇಂದ್ರವನ್ನು ಉದ್ಘಾಟಿಸಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾಹಿತಿ ಪಡೆದುಕೊಂಡರು. ಶಿಶು ತಜ್ಞ ಡಾ. ರಾಕೇಶ ಬಗಲಿ, ಡಾ. ಜಿ.ಎಸ್. ಗಲಗಲಿ, ಡಾ. ಕೃಷ್ಣಾ ಬಣ್ಣದ, ಡಾ. ದಯಾನಂದ ಕರೆಣ್ಣವರ ಇತರರಿದ್ದರು.ಜಮಖಂಡಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತುರ್ತು ಚಿಕಿತ್ಸೆಗೆ ೬ ಹಾಸಿಗೆಯ ನ್ಯೂಬಾರ್ನ್ ಸ್ಟೆಬಿಲೈಸೇಶನ್ ಕೇಂದ್ರವನ್ನು ಉದ್ಘಾಟಿಸಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾಹಿತಿ ಪಡೆದುಕೊಂಡರು. ಶಿಶು ತಜ್ಞ ಡಾ. ರಾಕೇಶ ಬಗಲಿ, ಡಾ. ಜಿ.ಎಸ್. ಗಲಗಲಿ, ಡಾ. ಕೃಷ್ಣಾ ಬಣ್ಣದ, ಡಾ. ದಯಾನಂದ ಕರೆಣ್ಣವರ ಇತರರಿದ್ದರು.
Published on: 

ಜಮಖಂಡಿ: ನ್ಯೂಬಾರ್ನ್ ಸ್ಟೆಬಿಲೈಸೇಶನ್ ಕೇಂದ್ರದಿಂದ ಹುಟ್ಟಿದ ತಕ್ಷಣ ಆರೋಗ್ಯ ಸಮಸ್ಯೆ ಎದುರಿಸುವ ಶಿಶುಗಳನ್ನು ಸ್ಥಿರಗೊಳಿಸಿ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಘಟಕ ಆರಂಭಕ್ಕೆ ಕಳೆದ ಎರಡು ವರ್ಷಗಳಿಂದ ಪ್ರಯತ್ನ ನಡೆದಿದ್ದು, ವೈದ್ಯರು ಹಾಗೂ ಸಿಬ್ಬಂದಿ ಸಹಕಾರದಿಂದ ಕಾರ್ಯಾರಂಭಗೊಂಡಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತುರ್ತು ಚಿಕಿತ್ಸೆಗೆ ೬ ಹಾಸಿಗೆಯ ನ್ಯೂಬಾರ್ನ್ ಸ್ಟೆಬಿಲೈಸೇಶನ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿ, ಆಸ್ಪತ್ರೆಯ ವಿಸ್ತರಣೆಗೆ ೧೫೦ ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ೮ರಿಂದ ೧೦ ಎಕರೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಇದ್ದ ೧೦೦ ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹಾಗೂ ಹೊಸ ಆಸ್ಪತ್ರೆಯನ್ನು ಸಮಗ್ರ ವೈದ್ಯಕೀಯ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.

ಎನ್‌ಬಿಎಸ್‌ಯು ಸೇವೆ ಬಲಪಡಿಸಲು ೯ ಸ್ಟಾಫ್ ನರ್ಸ್ಗಳು ಹಾಗೂ ಇಬ್ಬರು ಎಂಬಿಬಿಎಸ್ ವೈದ್ಯರ ಅಗತ್ಯವಿದ್ದು, ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೈಟೆಕ್ ಲ್ಯಾಬ್ ಹಾಗೂ ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಔಷಧಗಳ ಕೊರತೆ ನೀಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಹೊರಗಿನಿಂದ ಔಷಧ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪಡೆದುಕೊಂಡಿರುವ ಸುಮಾರು ೩೦ರಿಂದ ೪೦ ಲಕ್ಷದ ಬಾಕಿ ಹಣ ಪಾವತಿಗೂ ಒತ್ತಾಯಿಸಲಾಗುವುದು ಎಂದರು. ಸಾರ್ವಜನಿಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ ಎರಡು ಯುನಿಟ್ ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ನಾಲ್ಕು ಯುನಿಟ್‌ಗಳ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಎನ್‌ಬಿಎಸ್‌ಯು ಆರಂಭಿಸಲು ಕಳೆದ ಎರಡು ತಿಂಗಳಿಂದ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ನಿರಂತರ ಚರ್ಚೆ ನಡೆಸಲಾಗಿತ್ತು. ಇದು ಆಸ್ಪತ್ರೆಯ ಸೇವಾ ವಿಸ್ತರಣೆಯ ಮೊದಲ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಉಪಕರಣಗಳನ್ನು ಹೆಚ್ಚಿಸಬೇಕು ಎಂದರು.

ನಗರದಲ್ಲೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಒಟ್ಟುಗೂಡಿಸಿದ ಸಮಗ್ರ ಆಸ್ಪತ್ರೆ ಸಂಕೀರ್ಣ ನಿರ್ಮಾಣವಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಆಸ್ಪತ್ರೆಗಾಗಿ ದುಬಾರಿ ದರದಲ್ಲಿ ಪ್ರತ್ಯೇಕ ಜಮೀನು ಖರೀದಿಸುವ ಬದಲು ಲಭ್ಯವಿರುವ ಸರ್ಕಾರಿ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಶಿಶು ತಜ್ಞ ಡಾ. ರಾಕೇಶ ಬಗಲಿ ಮಾತನಾಡಿ, ಕಡಿಮೆ ತೂಕ, ದೇಹದ ಉಷ್ಣತೆ ಇಳಿಕೆ, ಸೋಂಕು, ರಕ್ತದಲ್ಲಿನ ಸಕ್ಕರೆ ಏರಿಳಿತ ಹಾಗೂ ಉಸಿರಾಟದ ತೊಂದರೆ ಇರುವ ನವಜಾತ ಶಿಶುಗಳನ್ನು ಎನ್‌ಬಿಎಸ್‌ಯುನಲ್ಲಿ ಸ್ಥಿರಗೊಳಿಸಿ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರ ಪ್ರಕರಣಗಳು ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯವಿರುವ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ವಿವರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಡಾ. ಕೃಷ್ಣಾ ಬಣ್ಣದ, ಡಾ. ದಯಾನಂದ ಕರೆಣ್ಣವರ, ಡಾ. ಶ್ರೀಶೈಲ ಕುಂಬಾರ, ಡಾ. ಗೌತಮಿ ಕಡ್ಲೆವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net