34 ಹೆಚ್ಚುವರಿ ಬಸ್‌ಗಳ ಅಗತ್ಯ

ಬೆಳಗ್ಗೆ, ರಾತ್ರಿ ಪ್ರಯಾಣಿಕರ ಪರದಾಟ
ಮಹಾಲಿಂಗಪುರ: ಪಟ್ಟಣದಲ್ಲಿ ಬಹುಕಾಲದಿಂದ ಬಾಕಿ ಇರುವ ಬಸ್ ಡಿಪೋ ನಿರ್ಮಾಣದ ಬೇಡಿಕೆಯನ್ನು ಈಡೇರಿಸುವುದರ ಜತೆಗೆ ಅಗತ್ಯ ಮಾರ್ಗಗಳಿಗೆ 34 ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಆಗ್ರಹಿಸಿದೆ.

 ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಬೆಳಗ್ಗೆ 6, 7 ಮತ್ತು 8 ಗಂಟೆಯ ವೇಳೆಯಲ್ಲಿ ಅಥಣಿ, ಹುಬ್ಬಳ್ಳಿ, ಹುಕ್ಕೇರಿ, ಬೆಳಗಾವಿ, ನಿಪ್ಪಾಣಿ ಸೇರಿ ಪ್ರಮುಖ ಮಾರ್ಗಗಳಿಗೆ ಸಮರ್ಪಕ ಬಸ್‌ಗಳಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

 ಬೆಳಗಿನ ಸಮಯ ಮಾತ್ರವಲ್ಲದೆ ಸಂಜೆ ಬಳಿಕವೂ ಸಾರಿಗೆ ಸಮಸ್ಯೆ ತೀವ್ರವಾಗಿದ್ದು, ರಾತ್ರಿ 8 ಗಂಟೆಯ ನಂತರ ಮಹಾಲಿಂಗಪುರದಿಂದ ಹೊರ ಜಿಲ್ಲೆ ಹಾಗೂ ಸುತ್ತಮುತ್ತಲಿನ ನಗರಗಳಿಗೆ ತೆರಳಲು ಸೂಕ್ತ ಬಸ್ ಸೌಲಭ್ಯವಿಲ್ಲ. ಮುಧೋಳ, ಜಮಖಂಡಿ ಸೇರಿ ಪ್ರಮುಖ ನಗರಗಳಿಂದ ಮಹಾಲಿಂಗಪುರಕ್ಕೆ ರಾತ್ರಿ ವೇಳೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

 ಪಟ್ಟಣಕ್ಕೆ ಸುಮಾರು 34 ಬಸ್‌ಗಳ ಅಗತ್ಯವಿದ್ದು, ತಕ್ಷಣ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವುದರೊಂದಿಗೆ ಮಹಾಲಿಂಗಪುರದಲ್ಲಿ ಪ್ರತ್ಯೇಕ ಬಸ್ ಡಿಪೋ ಸ್ಥಾಪನೆಗೆ ಸರ್ಕಾರ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

 ಹೋರಾಟ ಸಮಿತಿ ಮುಖಂಡ ವಿರೇಶ ಆಸಂಗಿ ಮಾತನಾಡಿ, ಸಾರಿಗೆ ಸಮಸ್ಯೆ ಕುರಿತು ಬಾಗಲಕೋಟೆ ಡಿಟಿಒ ಸೇರಿ ಸಂಬಂಧಿಸಿದ ಅಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಸಿದ್ದು ಶಿರೋಳ, ಹನುಮಂತ ಜಮಾದಾರ, ಮಹಮ್ಮದರಫಿಕ್ ಮಾಲದಾರ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಡಾ. ಪ್ರಭಾಕರ ಕುಳ್ಳೋಳಿ, ಡಿ.ವಿ. ನಾಗನೂರ ಸೇರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮಹಾಲಿಂಗಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿದರು. ವಿರೇಶ ಆಸಂಗಿ, ಹನುಮಂತ ಜಮಾದಾರ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಡಾ. ಪ್ರಭಾಕರ ಕುಳ್ಳೋಳಿ ಇತರರಿದ್ದರು.
Published on: 

ಮಹಾಲಿಂಗಪುರ: ಪಟ್ಟಣದಲ್ಲಿ ಬಹುಕಾಲದಿಂದ ಬಾಕಿ ಇರುವ ಬಸ್ ಡಿಪೋ ನಿರ್ಮಾಣದ ಬೇಡಿಕೆಯನ್ನು ಈಡೇರಿಸುವುದರ ಜತೆಗೆ ಅಗತ್ಯ ಮಾರ್ಗಗಳಿಗೆ 34 ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಆಗ್ರಹಿಸಿದೆ.

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಬೆಳಗ್ಗೆ 6, 7 ಮತ್ತು 8 ಗಂಟೆಯ ವೇಳೆಯಲ್ಲಿ ಅಥಣಿ, ಹುಬ್ಬಳ್ಳಿ, ಹುಕ್ಕೇರಿ, ಬೆಳಗಾವಿ, ನಿಪ್ಪಾಣಿ ಸೇರಿ ಪ್ರಮುಖ ಮಾರ್ಗಗಳಿಗೆ ಸಮರ್ಪಕ ಬಸ್‌ಗಳಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಬೆಳಗಿನ ಸಮಯ ಮಾತ್ರವಲ್ಲದೆ ಸಂಜೆ ಬಳಿಕವೂ ಸಾರಿಗೆ ಸಮಸ್ಯೆ ತೀವ್ರವಾಗಿದ್ದು, ರಾತ್ರಿ 8 ಗಂಟೆಯ ನಂತರ ಮಹಾಲಿಂಗಪುರದಿಂದ ಹೊರ ಜಿಲ್ಲೆ ಹಾಗೂ ಸುತ್ತಮುತ್ತಲಿನ ನಗರಗಳಿಗೆ ತೆರಳಲು ಸೂಕ್ತ ಬಸ್ ಸೌಲಭ್ಯವಿಲ್ಲ. ಮುಧೋಳ, ಜಮಖಂಡಿ ಸೇರಿ ಪ್ರಮುಖ ನಗರಗಳಿಂದ ಮಹಾಲಿಂಗಪುರಕ್ಕೆ ರಾತ್ರಿ ವೇಳೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಪಟ್ಟಣಕ್ಕೆ ಸುಮಾರು 34 ಬಸ್‌ಗಳ ಅಗತ್ಯವಿದ್ದು, ತಕ್ಷಣ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವುದರೊಂದಿಗೆ ಮಹಾಲಿಂಗಪುರದಲ್ಲಿ ಪ್ರತ್ಯೇಕ ಬಸ್ ಡಿಪೋ ಸ್ಥಾಪನೆಗೆ ಸರ್ಕಾರ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಮುಖಂಡ ವಿರೇಶ ಆಸಂಗಿ ಮಾತನಾಡಿ, ಸಾರಿಗೆ ಸಮಸ್ಯೆ ಕುರಿತು ಬಾಗಲಕೋಟೆ ಡಿಟಿಒ ಸೇರಿ ಸಂಬಂಧಿಸಿದ ಅಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದು ಶಿರೋಳ, ಹನುಮಂತ ಜಮಾದಾರ, ಮಹಮ್ಮದರಫಿಕ್ ಮಾಲದಾರ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಡಾ. ಪ್ರಭಾಕರ ಕುಳ್ಳೋಳಿ, ಡಿ.ವಿ. ನಾಗನೂರ ಸೇರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net