ಬಿಎಂಶ್ರೀ ಲೇಖನ ಬಹುಮಾನ ಪ್ರಕಟ

B M S
Published on

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನದ ಶ್ರೀಮತಿ ಸುಜಾತಾ ಮತ್ತು ಶ್ರೀ ರಾ.ಕೃ. ಶ್ರೀಧರಮೂರ್ತಿ ದತ್ತಿಯಿಂದ ನೀಡಲಾಗುವ ಅತ್ಯುತ್ತಮ ಲೇಖನ ಸ್ಪರ್ಧೆಯಲ್ಲಿ ದಯಾನಂದ (ಭಾಷಾಂತರ) ಮತ್ತು ವಸುಂಧರಾ (ಪ್ರವಾಸ) ಬಹುಮಾನ ಗಳಿಸಿದ್ದಾರೆ. ಉತ್ತಮ ಸಂಶೋಧನಾರ್ಥಿ ಬಹುಮಾನಕ್ಕೆ ಪಾಟೀಲ ಶೋಭಾ ಆಯ್ಕೆಯಾಗಿದ್ದಾರೆ.

ಬಹುಮಾನ ತಲಾ 1,500 ರೂ. ಹಾಗೂ ಗೌರವ ಒಳಗೊಂಡಿದ್ದು, 20ರಂದು ಸಂಜೆ 5 ಗಂಟೆಗೆ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net