ಚಿರತೆ ನೈಟ್ ರೌಂಡ್ಸ್​​​​​​ನ ಮತ್ತೊಂದು ವಿಡಿಯೋ ಔಟ್; ಎಚ್ಚರಿಕೆ ಸಂದೇಶ ನೀಡಿದ ಅರಣ್ಯ ಇಲಾಖೆ

leopard
Published on

ಆನೇಕಲ್: ಚಿರತೆಯ ನೈಟ್ ರೌಂಡ್ಸ್​​​​​​ನ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡ್ಲು ಗೇಟ್ ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ.

ಕಳೆದ ಅ.29ರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಗ್ಯಾರೇಜ್ ಒಳಗೆ ಚಿರತೆ ಓಡಾಟ ನಡೆಸಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನರಲ್ಲಿ ಚಿರತೆ ಭಯ ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಕೂಡ್ಲು ಭಾಗದ ಜನರು ಆತಂಕದಲ್ಲೇ ಇದ್ದಾರೆ.

ಟೆಕ್ ಪಾರ್ಕ್ ಮುಂಭಾಗದಲ್ಲಿ ಅರಣ್ಯ ಇಲಾಖೆಯಿಂದ ಅನೌನ್ಸ್ 

ಕೂಡ್ಲು ಗೇಟ್ ಸಮೀಪವಿರುವ ಹಲವಾರು ಕಂಪನಿಗಳಿರುವ ಏಕೆ ಆರ್ ಟೆಕ್ ಪಾರ್ಕ್ ಗೆ ಸಾವಿರಾರು ಜನ ಪ್ರತಿದಿನ ಕೆಲಸಕ್ಕೆ ಬರುತ್ತಾರೆ. ಈ ಟೆಕ್ ಪಾರ್ಕ್ ಕಡೆಂಜಾ ಅಪಾರ್ಟ್ಮೆಂಟ್ ಹಿಂಭಾಗದಲ್ಲಿದ್ದು, ರಾತ್ರಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಟೆಕ್ ಪಾರ್ಕ್ ಮುಂಭಾಗದಲ್ಲಿ ಅರಣ್ಯ ಇಲಾಖೆಯಿಂದ ಅನೌನ್ಸ್ ಮಾಡಿದೆ. ಮೈಕ್ ಮೂಲಕ ಮಾಹಿತಿ ನೀಡಲಾಗಿದ್ದು, ಚಿರತೆ ಕಾಣಿಸಿಕೊಂಡಿದೆ ಎಂದು ಎಚ್ಚರಿಕೆ ಸಂದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net