ಕೃಷಿ ವ್ಯವಸ್ಥೆ ಹಾಳು ಮಾಡುತ್ತಿರುವ ಔಷಧ

7npn1
Published on

ನಿಪ್ಪಾಣಿ: ಆಧುನಿಕ ಕಬ್ಬು ಬೇಸಾಯಕ್ಕೆ ನಿರ್ವಹಣೆ ಮುಖ್ಯ. ಸರಿಯಾದ ಬೀಜ, ನಾಟಿ ಮತ್ತು ನೀರಿನ ಬಳಕೆ ಅಗತ್ಯ. ಸೂಕ್ತ ನಿರ್ವಹಣೆ ಮಾಡಿದರೆ 86,032 ತಳಿಯ ಕಬ್ಬಿನಿಂದ ಎಕರೆಗೆ 200 ಟನ್​ ಪಡೆಯಬಹುದು ಎಂದು ಕಷಿ ತ ಪ್ರಶಾಂತ ರಾಜಮಾನೆ ಹೇಳಿದರು.

ಪಟ್ಟಣದಲ್ಲಿ ಜೊಲ್ಲೆ ಗ್ರುಪ್​ ವತಿಯಿಂದ ಕಷಿ ಉತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಾವಯವ ಕಷಿ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿರು ಕ್ರಾಂತಿಯ ಹೆಸರಿನಲ್ಲಿ ಲವತ್ತಾದ ಮಣ್ಣನ್ನು ವಿಷಪೂರಿತಗೊಳಿಸಲಾಗಿದೆ. ಆದರೆ, ಹಸಿರೀಕರಣದ ಹೆಸರಿನಲ್ಲಿ ರಾಸಾಯನಿಕ ಗೊಬ್ಬರ, ಹೆಬ್ರಿಡ್​ ಬೀಜ ಮತ್ತು ಅತ್ಯಂತ ಅಪಾಯಕಾರಿ ಔಷಧ ಬಳಕೆ ಮಾಡಲಾಗುತ್ತಿದೆ ಎಂದರು.

ಹಂಚಿನಾಳ(ಕೆಎಸ್​)ನ ಮಹೇಶಾನಂದ ಸ್ವಾಮೀಜಿ ಮಾತನಾಡಿ, ಆಧುನಿಕ ಕಷಿಯ ಹೆಸರಿನಲ್ಲಿ ವಿಷಪೂರಿತ ಬೆಳೆಯು ರೋಗಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಪ್ರಪಂಚದ ಜೀವಂತ ದೇವರು ಎಂದರೆ ರೆತ ಎಂದರು.

ಸಾಂಗಲಿ ಶಾಸಕ ಸುಧೀರ ಗಾಡ್ಗೀಳ್​, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಷಿ ಉತ್ಸವಕ್ಕೆ ಸಿಗುತ್ತಿರುವ ಸ್ಪಂದನೆ ತಪ್ತಿ ತಂದಿದೆ ಎಂದರು. ಸಾವಯವ ಕಷಿ ತ ಸುರೇಶ ದೇಸಾಯಿ ಮಾತನಾಡಿದರು.

65 ಅಗ್ನೀವಿರರನ್ನು ಸನ್ಮಾನಿಸಲಾಯಿತು. ಖಡಕಲಾಟದ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಹಾಲಶುಗರ್ಸ್​ ಕಾರ್ಖಾನೆ ಅಧ್ಯ ಮಲಗೊಂಡ ಪಾಟೀಲ, ಉಪಾಧ್ಯ ಪವನ ಪಾಟೀಲ, ನಿರ್ದೇಶಕ ಸುಕುಮಾರ ಪಾಟೀಲ, ಜಯವಂತ ಭಾಟಲೆ, ಸುನೀಲ ಪಾಟೀಲ, ಸಮಿತ ಸಾಸನೆ, ಬೀರೇಶ್ವರ ಸಹಕಾರಿಯ ಅಧ್ಯ ಅಪ್ಪಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಶಿರೋಳ ಕಷಿ ಅಧಿಕಾರಿ ಸಂಪತ್​ ಮುಲಿಕ್​, ಅರುಣ ಪಾಟೀಲ, ರಮೇಶ ಪಾಟೀಲ, ಅನಿಲ ಶಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net