ಗುರು ತೋರುವ ಸನ್ಮಾರ್ಗದಲ್ಲಿ ಮುನ್ನಡೆಯಿರಿ

22MDG3 SHIVANUBHAVA
Published on

ಮುಂಡರಗಿ: ಪ್ರತಿಯೊಬ್ಬರೂ ಗುರುವಿನ ಮಹತ್ವ ಅರಿಯಬೇಕು. ಜೀವನದಲ್ಲಿ ಗುರು ತೋರುವ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ಜರುಗಿದ 1870ನೇ ಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಫ.ಗು. ಹಳಕಟ್ಟಿಯವರು ತಮ್ಮ ಆಸ್ತಿಯನ್ನು ವಚನಗಳ ಸಂರಕ್ಷಣೆಗಾಗಿ ಬಳಸಿದರು. ಪ್ರತಿಯೊಬ್ಬರೂ ವಚನಗಳನ್ನು ಓದುವಂತಾಗಲು ಹಳಕಟ್ಟಿಯವರ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹನುಮರಡ್ಡಿ ಇಟಗಿ ಮಾತನಾಡಿ, ವಚನ ಪಿತಾಮಹ ಹಳಕಟ್ಟಿ ಅವರ ಜೀವನ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದರು. ಧಾರವಾಡ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಅವರನ್ನು ಸ್ವಾಮೀಜಿಗಳು ಗೌರವಿಸಿದರು. ಹೊಳಲು ಚನ್ನಬಸವ ದೇವರು ಮಾತನಾಡಿದರು. ಆರ್​ಎಫ್​ಒ ವೀರೇಂದ್ರ ಮರಿಬಸಣ್ಣವರ ಭಕ್ತಿಸೇವೆ ವಹಿಸಿಕೊಂಡಿದ್ದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಶ್ರಾವಣ ಮಾಸದ ಪ್ರಯುಕ್ತ ಜರುಗಲಿರುವ ಪುರಾಣ ಪ್ರವಚನ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ ಕುರಿತು ರ್ಚಚಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಮುಧೋಳ, ಉಪಾಧ್ಯಕ್ಷರಾಗಿ ವಿಶ್ವನಾಥ ಗಡ್ಡದ ಅವರನ್ನು ಆಯ್ಕೆ ಮಾಡಲಾಯಿತು. ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದಿಂದ ಸಂಗೀತ ಸೇವೆ ನಡೆಯಿತು. ಶಿಕ್ಷಕ ಎಸ್.ಎಸ್. ಇನಾಮತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net