ಸಮಗ್ರ ಕೃಷಿಪದ್ದತಿ ಅಳವಡಿಸಿಕೊಳ್ಳಿ

24KDR2
Published on

ಕಡೂರು: ರೈತರು ಸ್ವಾಭಿಮಾನದಿಂದ ಬದುಕಲು ಸಮಗ್ರ ಕೃಷಿ ಪದ್ದತಿ

ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ರೈತ ಒಕ್ಕೂಟ ಯುವ ಘಟಕದ

ರಾಜ್ಯಾಧ್ಯಕ್ಷ ಫೈಯೋಜ್‌ಖಾನ್ ತಿಳಿಸಿದರು. ತಾಲೂಕಿನ ಚಿಕ್ಕತಂಗಲಿ ಗ್ರಾಮದಲ್ಲಿ

ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪ್ರಗತಿ

ಪರ ರೈತರನ್ನು ಸನ್ಮಾನಿಸಿ ಮಾತನಾಡಿ, ತಾಲೂಕಿನಲ್ಲಿನ ರೈತರು ಸಮಗ್ರ ಕೃಷಿ

ಪದ್ದತಿಗೆ ಆದ್ಯತೆ ನೀಡಬೇಕು. ರೈತರು ಬೆಳೆದ ಬೆಳೆಗಳಿಗೆ ಸರ್ಕಾರಗಳು ಸೂಕ್ತ ಬೆಲೆ

ನಿಗದಿಪಡಿಸಿದರೆ ಹೆಚ್ಚು ಸಹಕಾರಿಯಾಗಲಿದೆ. ಎಂದರು.

ಕಾಂಗ್ರೆಸ್‌ಯುವ ಮುಖಂಡ ರಾಜು ಸೇವಾಪುರ ಮಾತನಾಡಿ, ರೈತರು ಸಾವಯವ

ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಲು

ಒತ್ತು ನೀಡಬೇಕು. ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ

ಸತ್ವ ಕಳೆದುಕೊಳ್ಳುವಂತಾಗಿದೆ ಎಂದರು. ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ

ದಯಾನಂದ್ ನಿಡಘಟ್ಟ, ರಾಜ್ಯ ಸಮಿತಿ ಸದಸ್ಯ ರವಿ ಬಾಸೂರು, ಪ್ರಗತಿಪರ

ರೈತರಾದ ಸಿ.ಟಿ.ಕುಮಾರಪ್ಪ, ವಾಜಿದ್, ಈಶ್ವರಪ್ಪ, ಕಲ್ಲೇಶಪ್ಪ, ಮಹಾದೇವಪ್ಪ,

ಜೆಫಾರ್ಮ್ ವೆಂಕಟೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net