

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ 2025- 26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊ0ಡಿದೆ ಎಂದು ಕೇಂದ್ರದ ಸಂಯೋಜಕ ನಾಗರಾಜ ಎಚ್.ಎನ್. ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ಹಾಗೂ ದೂರ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾಲಯ ಮೈಸೂರಿನ ಮುಕ್ತ ವಿಶ್ವವಿದ್ಯಾಲಯ. ಉನ್ನತ ಶಿಕ್ಷಣವನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸುತ್ತದೆ. ಇದು ಯುಜಿಸಿ, ಡಿಇಬಿ, ಎಐಸಿಟಿಇ ಮಾನ್ಯತೆ ಪಡೆದಿದೆ. ಬಿಎ, ಬಿಕಾಂ, ಬಿ.ಎಸ್‌ಸಿ, ಬಿಎಸ್‌ಸಿ ಐಟಿ, ಬಿಎಸ್‌ಸಿ ಹೋಂ ಸೈನ್ಸ್, ಬಿಬಿಎ, ಬಿಸಿಎ, ಬಿಎಲ್‌ಐಎಸ್‌ಸಿ, ಸ್ನಾತಕೋತ್ತರ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಸೇರಿ ಸುಮಾರು 60ಕ್ಕೂ ಹೆಚ್ಚು ಕೋರ್ಸ್ಗಳ ಪ್ರವೇಶಕ್ಕೆ ಅವಕಾಶವಿದೆ ಎಂದರು.