ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು

20CKD1
ಶಿರಗಾಂವ ಗ್ರಾಪಂ ಹಗರಣ ತನಿಖೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅನಿಲ ನಾವಿ, ಸಂಜು ಬಡಿಗೇರ, ಸಂತೋಷ ಪೂಜೇರಿ ಇತರರಿದ್ದರು.
Published on

ಚಿಕ್ಕೋಡಿ: ಶಿರಗಾಂವ ಗ್ರಾಪಂನಲ್ಲಿ ನರೇಗಾ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಜೆಸಿಬಿಯಿಂದ ಕಾಮಗಾರಿ ನಡೆಸಿ, ನಕಲಿ ಬಿಲ್ ಸೃಷ್ಟಿಸಿ ಪಿಡಿಒ ಮತ್ತು ಅಧ್ಯಕ್ಷರು ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಈಗಾಗಲೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರವೇ ಗ್ರಾಮ ಘಟಕ ಅಧ್ಯಕ್ಷ ಅನಿಲ ನಾವಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಶಿರಗಾಂವ ಗ್ರಾಪಂ ಹಗರಣದ ತನಿಖೆ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಚೇರಿ ಎದುರು ಈಚೆಗೆ ಕರವೇ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕರವೇ ತಾಲೂಕಾಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಗ್ರಾಪಂ ಹಗರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರವೇ ಉಪಾಧ್ಯಕ್ಷ ಸಂತೋಷ ಪೂಜೇರಿ, ಪ್ರತಾಪಗೌಡ ಪಾಟೀಲ, ಯುವರಾಜ ಕಾಂಬಳೆ, ಮಾಳಪ್ಪ ಕರೆಣ್ಣವರ, ಸಂತೋಷ ತಳವಾರ, ರಮೇಶ ಡಂಗೇರ, ಸೌರಭ ಹಿರೇಮಠ, ಕಮಲ ತಹಸೀಲ್ದಾರ್, ಆರ್ಮನ್ ಸಯ್ಯದ, ಶಿವರಾಜ ಮದಾಳೆ, ಶಿವಾಜಿ ಖಾಡೆ, ಸಂತೋಷ ಕುರಣೆ, ಅಮೂಲ ನಾವಿ, ಕಪೀಲ ಕೋರಿ, ರುದ್ರಯ್ಯ ಹಿರೇಮಠ, ಉದಯ ಶಿಂಗೆ, ಅನಿಲ ಕಟ್ಟಿ, ದೀಪಕ ಸಾಳುಂಕೆ, ದುರದುಂಡಿ ಬಡಿಗೇರ, ರಾಘವೇಂದ್ರ ಕರೆಣ್ಣವರ, ದಶರಥ ಭೋಸಲೆ, ಯುವರಾಜ ಸಂಖೆ, ಸೂರಜ ತೋರಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net