ನಾಟಿ ಕೋಳಿಮರಿ ಸಾಕಿ ಆರ್ಥಿಕ ಪ್ರಗತಿ ಸಾಧಿಸಿ

HKR KOLI MARI
Published on

ಹಿರೇಕೆರೂರ: ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತ ಮಹಿಳೆಯರು, ಕೃಷಿಯ ಜತೆಗೆ, ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಪಶುಸಂಗೋಪನಾ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ಉಚಿತವಾಗಿ 5 ವಾರದ ನಾಟಿ ಕೋಳಿಮರಿಗಳನ್ನು ವಿತರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೋಳಿ ಸಾಕಾಣಿಕೆಯಿಂದ ಉತ್ತಮ ಆದಾಯ ಪಡೆಯಬಹುದಾಗಿದೆ. ತಮಗೆ ವಿತರಿಸಿರುವ ಕೋಳಿ ಮರಿಗಳನ್ನು ಜೋಪಾನವಾಗಿ ಸಾಕಿಕೊಂಡು, ಆರ್ಥಿಕ ಪ್ರಗತಿ ಹೊಂದಬೇಕು ಎಂದರು.

ಪಪಂ ಸದಸ್ಯ ಸನಾವುಲ್ಲಾ ಮಕಾಂದಾರ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ಸುರೇಶ ಮಡಿವಾಳರ, ಮಲ್ಲಪ್ಪ ಚಲವಾದಿ, ಪಶು ವೈದ್ಯಾಧಿಕಾರಿ ಡಾ.ಕಿರಣ.ಎಲ್., ಡಾ.ಕವಿರಾಜ ಐರಣಿ ಹಾಗೂ ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net