ಮನೆಯ ಕಪಾಟಿನಲ್ಲಿರುವ ಶಿವನ ವಿಗ್ರಹದ ಪಕ್ಕ ಬಂದ ನಿಜ ನಾಗರಹಾವು!

snake
Published on

ಬಾಗಲಕೋಟೆ: ನಗರದ ಜೈನಪೇಟೆಯ ಮನೆಯೊಂದರಲ್ಲಿ ಶಿವನ ವಿಗ್ರಹದ ಪಕ್ಕ ನಿಜ ನಾಗರಹಾವು ಬಂದು ಕುಳಿತು ಅಚ್ಚರಿ ಮೂಡಿಸಿದ ಘಟನೆ ಬುಧವಾರ ಸಂಭವಿಸಿದೆ.

ಜೈನಪೇಟೆಯ ಶಂಕರಲಿಂಗ ದೇವಸ್ಥಾನ ಸಮೀಪದ ಸಂಗಣ್ಣ ಬಾದವಾಡಗಿ ಅವರ ಮನೆಗೆ ಬಂದ ನಾಗರಹಾವು ಮನೆ ಜಂತಿಯಿಂದ ಇಳಿದು ಕಪಾಟಿನಲ್ಲಿದ್ದ ಶಿವನ ಮೂರ್ತಿ ಪಕ್ಕ ಹೆಡೆ ಬಿಚ್ಚಿ ಕುಳಿತುಕೊಂಡಿತು. ಬಳಿಕ ಶಿವನ ವಿಗ್ರಹದ ನಾಗಾಭರಣದ ಮೇಲೂ ಹತ್ತಿ ಸುತ್ತಿಕೊಂಡು ಹೆಡೆ ಎತ್ತಿ ಸುಮಾರು ಹೊತ್ತು ಹಾಗೇ ಇತ್ತು.

ಇದನ್ನು ಗಮನಿಸಿದ ಮನೆಯವರು ಕ್ಷಣ ಕಾಲ ಗಾಬರಿಯಾಗಿದ್ದರು. ತಕ್ಷಣ ಉರಗ ರಕ್ಷಕನಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಉರಗತಜ್ಞ ರಾಜು, ನಾಗರಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net