ನಾಡಿನಲ್ಲಿ ಒಡೆದು ಆಳುವ ನೀತಿ : ಪ್ರೊ.ಎಂ.ಎಸ್.ಆಶಾದೇವಿ ಕಳವಳ

ಮೈಸೂರಿನ ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡ, ಕನ್ನಡಿಗ, ಕರ್ನಾಟಕ’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಸೀವಾದಿ ಚಿಂತಕಿ ಪ್ರೊ.ಎಂ.ಎಸ್.ಆಶಾದೇವಿ ಉದ್ಘಾಟಿಸಿದರು.  ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಎಸ್.ಡಿ. ಶಶಿಕಲಾ ಇದ್ದರು.

Published on: 

ಮೈಸೂರು: ನಾಡಿನಲ್ಲಿ ಜನರನ್ನು ನಾನಾ ಕಾರಣಗಳಿಗೆ ಒಡೆದು ಆಳುವ ನೀತಿ ಮುಂದುವರೆದಿದೆ. ಇದು ಕನ್ನಡ ಭಾಷಾ ವಿಷಯದಲ್ಲೂ ಜರು ಗುತ್ತಿದೆ ಎಂದು ಸೀವಾದಿ ಚಿಂತಕಿ ಪ್ರೊ.ಎಂ.ಎಸ್.ಆಶಾದೇವಿ ಕಳವಳ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡ, ಕನ್ನಡಿಗ, ಕರ್ನಾಟಕ’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕನ್ನಡದ ಧ್ವನಿ ವಿಘಟನೆಗೊಂಡಿದೆ. ಇದು ಕನ್ನಡ ತನವನ್ನು ಉಸಿರುಗಟ್ಟಿಸುವಂತಿದೆ. ಪಂಪನು ಸತ್ಯ ಹೇಳಲು ಹಿಂಜರಿಯಲಿಲ್ಲ. ‘ನಿಜವಾದ ಸಂಘರ್ಷ ಆಳ್ವಿಕೆ ಮಾಡುವವರ ವಿರುದ್ಧ ನಡೆಸಬೇಕು’ ಎಂದು ಪಂಪ ಹೇಳುತ್ತಾನೆ. ಈಗ ಪಂಪನ ತೀಕ್ಷ್ಣವಾದ ಧ್ವನಿ ಕಾಣಲು ಸಾಧ್ಯವಿದಿಯೇ ಎಂದು ಪ್ರಶ್ನಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿ, ಕನ್ನಡ ಸಂಭ್ರಮವು ಭಾವನೆಗಳಿಗೆ ಸೀಮಿತ ಆಗಬಾರದು. ಹೊಸ ನಾಡನ್ನು ಕಟ್ಟಲು ನಾಂದಿಯಾಗಬೇಕು. ಏಕೀಕರಣ ಸಂದರ್ಭದಲ್ಲಿ ಸಂಘ, ಸಂಸ್ಥೆಗಳು ಕನ್ನಡವನ್ನು ಉಳಿಸಲು ಕಟಿಬದ್ಧ್ದವಾಗಿಯೂ, ಪ್ರಜ್ಞಾಪೂರ್ವಕವಾಗಿಯೂ ಸಂಗಮಗೊಂಡು ಹೋರಾಡಿದವು. ಇಂದು ಅವರನ್ನು ನೆನೆಸಿಕೊಳ್ಳಲು ಸಂತಸವಾಗುತ್ತದೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಎಸ್.ಡಿ. ಶಶಿಕಲಾ ಇದ್ದರು.