ಒಕ್ಕಲಿಗರ ಸಂಘದ ಚುನಾವಣೆ: ಮೈಸೂರಲ್ಲಿ ಗೆದ್ದವರ ಲಿಸ್ಟ್​ ಇಲ್ಲಿದೆ

mysore okkaliga sangha
Published on

ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಮೈಸೂರು ಜಿಲ್ಲಾ ಕ್ಷೇತ್ರದ 3 ಸ್ಥಾನಕ್ಕೆ ಕೆ.ವಿ.ಶ್ರೀಧರ್, ಸಿ.ಜಿ.ಗಂಗಾಧರ್ ಮತ್ತು ಡಾ.ಎಂ.ಬಿ.ಮಂಜೇಗೌಡ ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಕ್ಷೇತ್ರ(ಚಾಮರಾಜನಗರ, ಊಟಿ)ದಲ್ಲಿ 3 ಸ್ಥಾನಕ್ಕೆ ಒಟ್ಟು 7 ಮಂದಿ ಸ್ಪರ್ಧಿಸಿದ್ದರು. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದ್ದ ಅಭ್ಯರ್ಥಿಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಡಿ.12ರಂದು ಮತದಾನ ನಡೆದಿತ್ತು. ಇಂದು(ಬುಧವಾರ) ಮತ ಎಣಿಕೆ ನಡೆದಿದ್ದು, ಮೊದಲ ಪ್ರಾಶಸ್ತ್ಯದಲ್ಲಿ ಕೆ.ವಿ.ಶ್ರೀಧರ್, 2ನೇ ಪ್ರಾಶಸ್ತ್ಯದಲ್ಲಿ ಸಿ.ಜಿ.ಗಂಗಾಧರ್ ಮತ್ತು 3ನೇ ಪ್ರಾಶಸ್ತ್ಯದಲ್ಲಿ ಎಂ.ಬಿ.ಮಂಜೇಗೌಡ ಗೆಲುವು ಸಾಧಿಸಿದ್ದಾರೆ.

ಮೈಸೂರು ಜಿಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದವರ ಹೆಸರು ಮತ್ತು ಪಡೆದ ಮತಗಳ ವಿವರ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net