ಕಣಜದ ಹುಳು ಕಚ್ಚಿ ಕೃಷಿಕ ಸಾವು

18091842
Published on

ಕುಂದಾಪುರ: ಕಣಜದ ಹುಳು ಕಚ್ಚಿ ಗಾಯಗೊಂಡಿದ್ದ ಕೃಷಿಕ, ಪಡುವರಿ ಹೇನುಬೇರು ನಿವಾಸಿ ರಾಮ ದೇವಾಡಿಗ(55) ಎಂಬುವರು ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ಅ.20ರಂದು ಮನೆಯಲ್ಲಿ ಬಚ್ಚಲು ಒಲೆಗೆ ಬೆಂಕಿ ಹಚ್ಚಿ ಕಟ್ಟಿಗೆ ಹಾಕುವಾಗ ಕಣಜದ ಹುಳು ಬಲಕೈಗೆ ಕಚ್ಚಿತ್ತು. ಮರುದಿನ ಕೈ ಬಾತು ಬೈಂದೂರು ಹಾಗೂ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸ್ಕಾನಿಂಗ್ ವ್ಯವಸ್ಥೆ ಇಲ್ಲದಿದ್ದರಿಂದ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಿದಾಗ ತಲೆಯಲ್ಲಿ ರಕ್ತಸ್ರಾವ ಆಗಿರುವುದು ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.22ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net