

ಇಳಕಲ್ಲ (ಗ್ರಾ) : ಮೊಹರಂ ಹಬ್ಬವನ್ನು ಆಚರಿಸಲು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 50ರ ಮರಿಯಮ್ಮನಹಳ್ಳಿ ಸಮೀಪದಲ್ಲಿ ಕಾರು ಅಪಘಾತಕ್ಕೆ ಈಡಾಗಿ ಸ್ಥಳದಲ್ಲಿಯೇ ದಂಪತಿ ಕೊನೆಯುಸಿರೆಳೆದಿದ್ದು, ಮೂವರು ಮಕ್ಕಳಿಗೆ ಗಾಯಗಳಾಗಿವೆ.
ತಾಲೂಕಿನ ಚಟ್ನಿಹಾಳ ಗ್ರಾಮದ ಮುತ್ತಪ್ಪ ಪೂಜಾರಿ (32), ಪತ್ನಿ ರೇಣುಕಾ ಪೂಜಾರಿ (27) ಮೃತರು. ಮಕ್ಕಳಾದ ಅನುಶ್ರೀ, ರೂಪಶ್ರೀ ಹಾಗೂ ಖುಷಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಮುತ್ತಪ್ಪ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮ್ಮ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬಕ್ಕೆ ಸ್ವಗ್ರಾಮಕ್ಕೆ ಬರುವಾಗ ಅವಘಡ ಸಂಭವಿಸಿದೆ.