

ಸಿದ್ದಾಪುರ: ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಅವರ ಸಂಯೋಜನೆಯಲ್ಲಿ ಭುವನಗಿರಿ ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ನಡೆದ ಗಾನಗೋಷ್ಠಿ ಮೆಚ್ಚುಗೆ ಗಳಿಸಿತು.
ಸುನೀತಾ ಭಟ್ಟ ಶಿರಸಿ ಹಾಗೂ ವಿನಾಯಕ ಹೆಗಡೆ ಹಿರೇಹದ್ದ ಅವರ ಹಿಂದುಸ್ತಾನಿ ಗಾಯನಕ್ಕೆ ಸಂವಾದಿನಿಯಲ್ಲಿ ಅಜಯ ಹೆಗಡೆ ವರ್ಗಾಸರ ಹಾಗೂ ಭರತ್ ಹೆಗಡೆ ಹೆಬ್ಬಲಸು ಹಾಗೂ ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ ಹಾಗೂ ನಿತಿನ್ ಹೆಗಡೆ ಕಲಗದ್ದೆ ಸಾಥ್ ನೀಡಿದರು.
ಸಂಘಟಕ ನಾರಾಯಣ ಹೆಗಡೆ ಕಲ್ಲಾರೆಮನೆ ಕಾರ್ಯಕ್ರಮ ನಿರ್ವಹಿಸಿದರು.